

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಇತ್ತೀಚಿಗೆ ರಾಜ್ಯ ಸರ್ಕಾರದಿಂದ ಸಂದಾಯವಾಗುತ್ತಿದ್ದ ಬರ ಪರಿಹಾರ, ತಾಂತ್ರಿಕ ದೊಷದಿಂದ 9854 ರೈತರ ಖಾತೆಗೆ ಹಣ ಬಂದಿಲ್ಲ. ಇದರಿಂದ ರೈತರು ಬ್ಯಾಂಕ್ ಹಾಗೂ ಕಚೇರಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬರಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಎಸ್‌ಡಿಆರ್‌ಎಫ್ ಅಥವ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಅರ್ಹ ರೈತರಿಗೆ ಈಗಾಗಲೇ ಮೊದಲನೇ ಹಂತದಲ್ಲಿ ಅರ್ಹ ರೈತರಿಗೆ ಗರಿಷ್ಟ ರೂ 2 ಸಾವಿರ ರೂ. ನಂತೆ 130.08 ಕೋಟಿ ರೂ ಅನುದಾನ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ. ಆದರೆ 9854 ರೈತರಿಗೆ ಪರಿಹಾರದ ಹಣ ಸಂದಾಯವಾಗದೇ ವಾಪಾಸ್ ಆಗಿದೆ. ಆಗಿರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ರೈತರು ಪರಿಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಫ್ರೂಟಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾAಶದ ಮೂಲಕ ಹಂತಹAತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಈ ವರೆಗೆ ಎರಡನೇ ಹಂತದಲ್ಲಿ ಒಟ್ಟು 109543 ರೈತರಿಗೆ 130.08 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ 9854 ರೈತರಿಗೆ ನಾನಾ ಕಾರಣಗಳಿಂದ ಹಣ ವಾಪಸ್ಸು ಬಂದಿರುತ್ತದೆ.
ರೈತರ ಹೆಸರು ಆಧಾರ್ ಮತ್ತು ಫ್ರೂಟಸ್ ಐಡಿ ಮ್ಯಾಚ್ ಆಗದೇ ಇರುವುದು. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೇ ಇರುವುದು. ಬ್ಯಾಂಕ್‌ನ ಐಎಫ್.ಎಸ್.ಸಿ ಕೋಡ್ ಸರಿಯಿರದೇ ಇರುವುದು. ಖಾತೆ ನಿಷ್ಕ್ರಿಯ ಆಗಿರುವುದು. ಸೇರಿದಂತೆ ಇತರೆ ಕಾರಣಗಳಿಂದ ರೈತರ ಖಾತೆಗಳಿಗೆ ಪರಿಹಾರ ಜಮಾ ಆಗದೇ ಇರಬಹುದು. ಆದ್ದರಿಂದ ರೈತರು ರದ್ದಾಗಿರ ಖಾತೆಯನ್ನು ರೀ ಓಪನ್ ಮಾಡುವುದು. ಫ್ರೂಟಸ್ ತಂತ್ರಾAಶದಲ್ಲಿ ಹೆಸರು ಅಪ್ಡೇಟ್ ಮಾಡುವುದು. ಎನ್ ಪಿ ಸಿ ಐ ಮಾಡಿಕೊಳ್ಳಬೇಕು.
ಹೊಸಪೇಟೆ 585 ರೈತರಿಗೆ ಹಣ ಜಮವಾಗಿಲ್ಲ. ಹೂವಿನ ಹಡಗಲಿ 2069 ರೈತರು, ಹಗರಿಬೊಮ್ಮನಹಳ್ಳಿ 1166 ರೈತರು, ಹರಪನಹಳ್ಳಿ 2940 ರೈತರು, ಕೊಟ್ಟೂರು1284 ರೈತರು, ಕೂಡ್ಲಿಗಿ 1810 ರೈತರು ಒಟ್ಟು 9854 ರೈತರ ಹಣ ವಾಪಾಸ್ ಆಗಿದೆ. ಆದ್ದರಿಂದ ತಾಲೂಕುಗಳಲ್ಲಿ ಹಳ್ಳಿಯ ಹೆಸರು ಸೇರಿದಂತೆ ರೈತರ ಹೆಸರನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ಲಿಸ್ಟ್ ನೀಡಲಾಗಿದೆ. ಹಣ ಜಮ ಆಗದ ರೈತರ ಮನೆಗಳಿಗೆ ಹೋಗಿ ಅಲ್ಲಿ ಆಗಿರುವ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರೈತರು ಮೊದಲು ಜಮೀನಿನ ಪಹಣಿಗೆ ತಮ್ಮ ಫ್ರೂಟಸ್ ಐಡಿ ಸಂಖ್ಯೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಬ್ಯಾಂಕ್ ಖಾತೆಗೆ ಎನ್ ಪಿ ಸಿ ಐ ಲಿಂಕ್ ಪರಿಶೀಲಿಸಿಬೇಕು. ಎನ್.ಪಿಸಿ ಲಿಂಕ್ ಇದ್ದಲ್ಲಿ ಫ್ರೂಟಸ್ ಐಡಿಯಲ್ಲಿ ಇರುವಂತಡ ಬ್ಯಾಂಕ್ ಖಾತೆ ಸಂಖ್ಯೆಗೂ ಎನ್ ಪಿ ಸಿ ಐ ಲಿಂಕ್ ಇರುವ ಸಂಖ್ಯೆಯೂ ಒಂದೇ ಆಗಿಬೇಕು. ಸಮಸ್ಯೆ ಇದ್ದಲ್ಲಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬದಲಾವಣೆ ಮಾಡಿಸಿ. ಆಧಾರ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರೂ ಒಂದೇ ಆಗಿರಬೇಕು. ಅಕೌಂಟ್ ಇನ್-ವ್ಯಾಲಿಡ್, ಕ್ಲೋಸ್, ಬ್ಲಾಕ್, ಆಧಾರ್ ನಾಟ್ ಸೀಡಿಂಗ್ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಕೊಳ್ಳಬೇಕು. ಆಧಾರ್ ಕಾರ್ಡ್ದಲ್ಲಿ ಇರುವ ಹೆಸರಿಗೂ ಪಹಣಿ ಪತ್ರಿಕೆಯಲ್ಲಿ ಇರುವ ಹೆಸರೂ ಒಂದೇ ಆಗಿರಬೇಕು. https://parihara.karnataka.gov.in/service92/ ಪರಿಶೀಲಿಸಿಕೊಳ್ಳುವುದು. ಸರ್ಕಾರದಿಂದ ಇನ್ನು ಹಂತಹAತವಾಗಿ ಪರಿಹಾರದ ಹಣವನ್ನು ಜಮೆ ಮಾಡಲಾಗುತ್ತಿರುತ್ತದೆ.
ಜಿಲ್ಲೆಯಲ್ಲಿ ಕಳೆದ ವರ್ಷ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ 109543 ರೈತರಿಗೆ 130.08 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಹಣ ಕೊಡ ಸಂದಾಯವಾಗುತ್ತಿದೆ. ಈ ಪೈಕಿ 9854 ರೈತರಿಗೆ ಕಾರಣ ಅಂತರಿಗಳಿAದ ಸಮಸ್ಯೆಯಾಗಿ ಹಣ ಜಮವಾಗಿಲ್ಲ. ಆದ್ದರಿಂದ ರೈತರು ಕೂಡಲೇ ಸಮಸ್ಯೆ ಪರಿಹರಿಸಿಕೊಳ್ಳಬೇಕು. ರೈತರ ಮನೆಗೆ ಹೋಗಲು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ. ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿ, ವಿಜಯನಗರ