

ಹೊಸಪೇಟೆ: ರೈತರು ಯಾವುದೇ ಒಂದು ಬೆಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸದೇ ಸಮಗ್ರ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಡಿಡಿ ನಯುಮ್ ಪಾಷಾ ಹೇಳಿದರು.
ರೈತ ದಿನಾಚರಣೆ ನಿಮಿತ್ತ ಕೃಷಿ ಇಲಾಖೆ, ಕೃಷಿ ಸಮಾಜ ಮತ್ತು ಸಮಗ್ರ ಕೃಷಿ ಉತ್ಕೃಷ್ಟ ಕೇಂದ್ರದಿAದ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಚೌಧರಿ ಚರಣಸಿಂಗ್‌ರಿಗೆ ನಮನ ಹಾಗೂ ಕಿಸಾನ್ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಸಿರು ಕ್ರಾಂತಿ ಪರಿಣಾಮ ಕೃಷಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿದ್ದು, ಲಭ್ಯವಿರುವ ಹೊಸ ತಂತ್ರಜ್ಞಾನ ಬಳಸಿ ರೈತರು ಆದಯ ಹೆಚ್ಚಿಸಿಕೊಳ್ಳಬೇಕು. ರಸಾಯನಿಕಯುಕ್ತ ಆಹಾರ ಸೇವನೆ ಹೆಚ್ಚಿದಂತೆ ಮನುಷ್ಯನ ಆಯುಸ್ಸು ಕಡಿಮೆಯಾಗುತ್ತಿದೆ, ಅದಕ್ಕೆ ಸದೃಢ ಆರೋಗ್ಯ ಹೊಂದಲು ಸಿರಿಧಾನ್ಯಗಳ ಸೇವನೆ ಅಗತ್ಯವಾಗಿದೆ. ನಮ್ಮ ಸುತ್ತಲಿನ ವಾತಾವರಣದಷ್ಟೆ ನಮ್ಮ ಆಹಾರ ಸೇವನೆ ಕುರಿತು ಎಚ್ಚರವಹಿಸಬೇಕಿದೆ, ಜಗತ್ತು ಭಯಾನಕ ರೋಗಗಳ ತಾಣವಾಗುತ್ತಿದೆ. ಇಂತಹ ವಿಷಮಸ್ಥಿತಿಯಲ್ಲಿ ದೇಶಿ ಆಹಾರ ಧಾನ್ಯಗಳು ಬೆಳೆದು ಬಳಕೆ ಮಾಡಬೇಕು ಎಂದರು.
ಕಚೇರಿಯ ಸಹಾಯಕ ನಿರ್ದೇಶಕಿ ಪ್ರಿಯಾಂಕ ಮಾತನಾಡಿ, ಮಾತನಾಡಿ, ಕೃಷಿ ಹಾಗೂ ರೈತ ದೇಶದ ಬೆನ್ನೆಲಬು. ರೈತನೇ ನೈಜ ದಾಸೋಹಿ. ಆತನ ಋಣ ತೀರಿಸಲು ಸಾಧ್ಯವಿಲ್ಲ. ರೈತರು ಮತ್ತು ಕೃಷಿಯ ಅಭಿವೃದ್ದಿಗೆ ಪೂರಕವಾದ ನೀತಿಗಳು ಜಾರಿಗೊಳಿಸಬೇಕಾಗಿದೆ. ರೈತರು ಯಾವುದೇ ಕಾರಣಕ್ಕೂ ಧೃತಿಗೆಡದೆ, ಆತ್ಮಹತ್ಯೆಯ ದಾರಿ ತುಳಿಯಬೇಡಿ ಎಂದು ಮಾನಸಿಕ ಸ್ಥೈರ್ಯ ತುಂಬಿದರು.
ಸಂಪನ್ಮೂಲ ವ್ಯಕ್ತಿ ಮಾರುತಾ ಪೂಜಾರ್ ಮಾತನಾಡಿ, ಒಂದೇ ಬೆಳೆಯನ್ನು ಅವಲಂಬಿಸದೇ ತರಕಾರಿ, ಹಣ್ಣುಗಳು, ಹೂವುಗಳ ಕೃಷಿ ಮಾಡಬೇಕು. ಒಂದು ವೇಳೆ ಒಂದು ಬೆಳೆ ವಿಫಲವಾದರೆ, ಮತ್ತೊಂದು ಬೆಳೆಯಲು ಮತ್ತು ವರ್ಷಪೂರ್ತಿ ಇಳುವರಿ ಸಾಧ್ಯವಾಗುತ್ತದೆ. ಸಾವಯುವ ಗೊಬ್ಬರದ ವ್ಯಾಪಕ ಬಳಕೆ, ಬೀಜೋಪಚಾರ, ಹೊಸ ತಂತ್ರಜ್ಞಾನದ ಬಳಕೆ, ಸುಧಾರಿತ ಬೀಜಗಳ ಬಳಕೆ, ನಿಯಮಿತವಾಗಿ ಮಣ್ಣಿನ ಪರೀಕ್ಷೆ, ಕೃಷಿಯ ಜೊತೆ ಹೈನುಗಾರಿಕೆ, ತೋಟಗಾರಿಕೆ, ಕೋಳಿ, ಕುರಿ ಸಾಕಾಣಿಕೆಯ ಸಮಗ್ರ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಡಿಡಿ ನಯುಮ್ ಪಾಷಾ, ಕಚೇರಿಯ ಸಹಾಯಕ ನಿರ್ದೇಶಕಿ ಪ್ರಿಯಾಂಕ, ಸಂಪನ್ಮೂಲ ವ್ಯಕ್ತಿಗಳಾದ ಮಾರುತಾ ಪೂಜಾರ್, ಬಸಯ್ಯಸ್ವಾಮಿ, ರೈತಮುಖಂಡರಾದ ಸಿ.ಎ.ಗಾಳೆಪ್ಪ, ವೀರಭದ್ರಾ ಇತರರಿದ್ದರು.