ರೈತರಿಗೆ ಪರಿಹಾರ ನೀಡಿ

16 MANJU 05
Published on

ಹೊಸಪೇಟೆ: ರೈತರಿಗೆ ಬೆಳೆ ಪರಿಹಾರ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನೇತೃತ್ವದಲ್ಲಿ ತಾಲೂಕಿನ ವಡ್ರಹಳ್ಳಿ ಗ್ರಾಮಸ್ತರುಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ಟಿ.ನಾಗರಾಜ್ ಮಾತನಾಡಿ, ಈ ಕಾರ್ಖಾನೆಯು ಸುಮಾರು 20ವರ್ಷಗಳಿಂದ ನಡೆಯುತ್ತಿದೆ. ಇದರಿಂದ ರೈತರ ಬೆಳೆಗಳು ಇಳುವರಿ ಸೇರಿ ಇತರೆ ಸಮಸ್ಯೆಗಳು ಬರುತ್ತಿವೆ. ಬೆಳೆ ಪರಿಹಾರಕ್ಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಹಾಗೂ ವಡ್ರಹಳ್ಳಿ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯ ಕೂಡ ಒಸಗಿಸಿಲ್ಲ. ಈ ಕಾರ್ಖಾನೆಯು ಕರಡಿದಾಮ ಗುಡ್ಡಕ್ಕೆ ಒತ್ತುವರಿಯಾಗಿ ಮಾಡಲಾಗಿದೆ. ಗ್ರಾಮಕ್ಕೆ ಬರುವ ಹಳ್ಳವನ್ನು ಕೂಡ ಒತ್ತುವರಿ ಮಾಡಿದ್ದಾರೆ. ಆದ್ದರಿಂದ ತಹಸೀಲ್ದಾರ್ ನೇತೃತ್ವದಲ್ಲಿ ರೈತರು ಹಗೂ ವಡ್ರಹಳ್ಳಿ ಗ್ರಾಮಸ್ಥರು ಜಂಟಿಯಾಗಿ ಸಭೆ ಕರೆದು ಸಮಸ್ಯೆಯನ್ನು ಪರಿಹರಿಸಬೇಖು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಎಂ.ಜಡೆಪ್ಪ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಸಿ.ಪಿ.ಎಂ. ಪಕ್ಷದ ಕಾರ್ಯದರ್ಶಿ ವಿ.ಸ್ವಾಮಿ, ಗ್ರಾಮಸ್ತರಾದ ಚಿದಾನಂದ, ಯು.ವಿಜಯಕುಮಾರ್, ವೆಂಕಟೇಶ್, ಸಿ.ಸಿದ್ದಪ್ಪ, ಹೇಮರೆಡ್ಡಿ, ರಾಜೇಶ್, ರಾಜಶೇಖರ್, ಸಣ್ಣೆಪ್ಪ, ಹೊನ್ನೂರಪ್ಪ, ಗೋವಿಂದಪ್ಪ, ನಾಗೇಶ, ನೀಲಕಂಠ, ಬಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net