ಈರುಳ್ಳಿ ಬೆಳೆಗಾರರಿಗೆ ಪರಿಹಾರ ನೀಡಿ

09 MANJU 03
Published on

ಹೊಸಪೇಟೆ: ಈ ಸಲ ಈರುಳ್ಳಿ ತೀವ್ರ ನಷ್ಟವಾಗಿದ್ದು, ಬೆಳಗಾರರಿಗೆ ಎಕರೆಗೆ 60 ಸಾವಿರ ರೂ.ಗಳಂತೆ ಸರ್ಕಾರ ಪರಿಹಾರ ನೀಡಬೇಕು ಎಂದು ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ.ಸಿದ್ದೇಶ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಕರೆಗೆ ಕನಿಷ್ಟ ಕ್ವಿಂಟಲ್‌ನಷ್ಟೂ ಬೆಳೆ ಬರುತ್ತಿಲ್ಲ. ರಾಜ್ಯದಲ್ಲಿ ಒಟ್ಟು 1.35 ಲಕ್ಷ ಎಕರೆ ಬೆಳೆ ಹಾಳಾಗಿವೆ. ಅಧಿಕಾರಿಗಳು ಸರ್ವೇ ನಡೆಸಿದ್ದು, ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಆದರೆ ಇನ್ನೂ ಪರಿಹಾರ ಹಣ ಬಂದಿಲ್ಲ ಎಂದರು.

ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈರುಳ್ಳಿ ಸಂಗ್ರಹಣಾ ಘಟಕಗಳನ್ನು ನಿರ್ಮಾಣ ಮಾಡಬೇಕು. ಬೆಳೆ ವಿಮೆ ಇದುವರೆಗೆ ಸಿಕ್ಕಿಲ್ಲ. ವಿಮಾ ಕಂಪನಿಯವರು ಶೀಘ್ರ ವಿಮಾ ಮೊತ್ತ ನೀಡಬೇಕು, ಈರುಳ್ಳಿ ಬೆಳಗಾರ ರೈತರಿಗೆ ಒಂದು ವರ್ಷಕ್ಕೆ ಕೇಂದ್ರ ಸರ್ಕಾರವು 15 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷರನ್ನಾಗಿ ಕರಡಿ ಶಾಂತಕುಮಾರ್, ವಿಜಯನಗರ ಜಿಲ್ಲಾಧ್ಯಕ್ಷರನ್ನಾಗಿ ಕೊಚಲಿ ಮಂಜುನಾಥ ಅವರನ್ನು ನೇಮಕ ಮಾಡಲಾಯಿತು.

ಯುವ ಘಟಕ ರಾಜ್ಯಾಧ್ಯಕ್ಷ ಪ್ರಮೋದ ತಗ್ಗಿ, ಪ್ರಮುಖರಾದ ಲೋಕಣ್ಣ ಉಳ್ಳಗಡ್ಡಿ, ಮಂಜುನಾಥ ಯಾಟಿ, ಕೋಟ್ರೇಶ್, ಉಮೇಶ್, ಟಿ.ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net