

ಹೊಸಪೇಟೆ : ಮಣ್ಣಿನಿಂದ ತಯಾರಿಸಿದ ಉತ್ತಮ ಪರಿಸರ ಸ್ನೇಹಿ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ ಬಹುಮಾನ ನೀಡಲಾಗುವುದು ಎಂದು ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪಿಒಪಿ ಗಣೇಶನ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗಲಿದೆ. ಆದ್ದರಿಂದ ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾಪನೆಯಿಂದ ಪರಿಸರಕ್ಕೆ ಪೂರಕವಾಗಬೇಕು. ಸೆಪ್ಟೆಂಬರ್ 7 ರಿಂದ ನಡೆಯಲಿರುವ ಗಣೇಶ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಈ ಹಬ್ಬವನ್ನು ಜಾತ್ಯಾತೀತವಾಗಿ ಆಚರಿಸಬೇಕು. ಆದ್ದರಿಂದ ಯುವಕರಿಗೆ ಪ್ರೋತ್ಸಾಹಿಸಿ ಈ ಬಾರಿ ಉತ್ತಮ ಸಂದೇಶ ನೀಡುವ ಮಣ್ಣಿನ 5 ಅಡಿ ಒಳಗೆ ಇರುವ ಗಣಪತಿಗೆ ಮೊದಲ, ಎರಡನೇ, ಮೂರನೇ ಹಾಗೂ ವಿಶೇಷವಾಗಿ ಒಂದು ಗಣಪತಿಗೆ ಬಹುಮಾನ ನೀಡಲಾಗುತ್ತದೆ. ನಗರದಲ್ಲಿ ವಿವಿಧ ಸಮುದಾಯಗಳ ಪ್ರಮುಖರಿಂದ ಎಂದರು.
ಪ್ರಮುಖರಾದ ಪ್ರಕಾಶ್ ಮೆಹರ್ವಾಡ, ಕೆ.ಚಂದ್ರಶೇಖರ್, ರವಿಕಾಂತ್, ರೇಖಾ, ರಾಧಾ, ಗುಜ್ಜಲ್ ಗಣೇಶ್, ಡಾ.ಮಂಟೂರ್ ಮಠ್, ವೇಣುಗೋಪಾಲ್, ಅರುಣ್ ಕುಮಾರ್, ಶ್ರೀಧರ್, ಲಲಿತಾ, ರಾಘವೇಂದ್ರ ಇತರರಿದ್ದರು.