ಎಲಿವೇಟೆಡ್ ಕಲ್ಯಾಣ ಕರ್ನಾಟಕ: ಸ್ಟಾರ್ಟ್ ಅಪ್ ಗೆ ಉತ್ತೇಜಕ-  ಡಾ.ಸಂಧ್ಯಾ ಅನ್ವೇಕರ್

070922 Hosapete Kalyan Karnataka Department Entrepreneurship and Innovation Camp
ಹೊಸಪೇಟೆಯ ಪ್ರೌಢದೇವರಾಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಭಾಗದ ಉದ್ಯಮಶೀಲತೆ ಮತ್ತು ಆವಿಷ್ಕಾರ ಕುರಿತ ಶಿಬಿರದಲ್ಲಿ ಡಾ.ಸಂಧ್ಯಾ ಅನ್ವೇಕರ್ ಮಾತನಾಡಿದರು.
Published on

ಹೊಸಪೇಟೆ: ‘ಎಲಿವೇಟ್ ಕಲ್ಯಾಣ ಕರ್ನಾಟಕ’ ಯೋಜನೆ ಈ ಭಾಗದ ಅಭಿವೃದ್ಧಿಗೆ ಉತ್ತೇಜಕವಾಗಲಿದೆ. ವಿದ್ಯಾರ್ಥಿಗಳು, ಯುವ ಸಮೂಹವನ್ನು ಉದ್ಯಮಶೀಲತೆಯತ್ತ ಆಕರ್ಷಿಸಲಿದೆ ಎಂದು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿಯ ಕಾರ್ಯಕ್ರಮಾಧಿಕಾರಿ ಡಾ.ಸಂಧ್ಯಾ ಅನ್ವೇಕರ್ ಅಭಿಪ್ರಾಯಪಟ್ಟರು.

ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆ.ಕೆ.ಆರ್.ಡಿ.ಬಿ)ಯಿಂದ ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಭಾಗದ ಉದ್ಯಮಶೀಲತೆ ಮತ್ತು ಆವಿಷ್ಕಾರ ಕುರಿತ ಒಂದು ದಿನದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು ಹೊರತುಪಡಿಸಿ, ರಾಜ್ಯದ ಹಿಂದುಳಿದ ಪ್ರದೇಶಗಳಿಗೂ ಉದ್ಯಮಶೀಲತೆಯನ್ನು ವಿಸ್ತರಿಸಲು ಯೋಜನೆಯ ಭಾಗವಾಗಿ ಉದ್ಯಮಶೀಲತಾ ಪ್ರೇರಣಾ ಸರಣಿ ಶಿಬಿರಗಳನ್ನು ಹಮ್ಮಿಕೊಂಡಿದೆ. ಈ ಶಿಬಿರದಲ್ಲಿ ವಿದ್ಯಾರ್ಥಿಗಳ ಕೌಶಲವನ್ನು ಗುರುತಿಸಿ, ಹೊಸ ಸ್ಟಾರ್ಟ್ ಅಪ್ ಆರಂಭಿಸುಲು ಉತ್ತೇಜನೆ ಮತ್ತು ಆರ್ಥಿಕ ಸೌಲಭ್ಯ ಪಡೆಯಲು ಮಾರ್ಗದರ್ಶನ ನೀಡಲಾಗುತ್ತದೆ ಎಂದು ಡಾ.ಸಂಧ್ಯಾ ಅನ್ವೇಕರ್ ಹೇಳಿದರು.

ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ, ಪ್ರಾಚಾರ್ಯ ಡಾ.ಎಸ್.ಎಂ.ಶಶಿಧರ್, ಕೆಡಿಇಎಂ ಸಂಪನ್ಮೂಲ ವ್ಯಕ್ತಿ ಗೌರವ್ ಕೆ. ಮಾತನಾಡಿದರು. ಸ್ಟಾರ್ಟ್ ಅಪ್ ಕರ್ನಾಟಕ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಬಿ ಎನ್, ಸಂಪನ್ಮೂಲ ವ್ಯಕ್ತಿಗಳಾದ ಸುಧಾಕರ್ ಸ್ಯಾಮ್ಯುಯೇಲ್, ಕಾರ್ಯಕ್ರಮ ಸಂಚಾಲಕ ಪ್ರೊ.ಎಸ್.ಪ್ರಕಾಶ್, ಪ್ರೊ.ಸುಮಾ, ಡಾ.ಬಾಲಮುರುಗನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net