ಡಿ.22 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Published on

ಹೊಸಪೇಟೆ: ಸಂಕ್ಲಾಪುರದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕೆಲಸದ ನಿಮಿತ್ತ ಡಿ.22 ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ನಗರ ಉಪವಿಭಾಗ-2 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

11.ಕೆವಿ ಫೀಡರ್‌ಗಳಾದ ಜಂಬುನಾಥ ಗುಡಿ, ಕೆಓಎಫ್, ಎಂ.ಪಿ.ಪ್ರಕಾಶ ನಗರ, ಸಂಕ್ಲಾಪುರ ವ್ಯಾಪ್ತಿಗೆ ಒಳಪಡುವ ಸುತ್ತಮುತ್ತಲಿನ ಪ್ರದೇಶಗಳಾದ ಸಾಯಿಕಾಲೋನಿ, ಹಂಚಿನಗುಡಿ, ಕೊಂಡನಾಯಕನಹಳ್ಳಿ, ಅನಂತಶಯನಗುಡಿ, ಸಂಕ್ಲಾಪುರ ಕೈಗಾರಿಕಾ ಪ್ರದೇಶ, ಕರ್ನಾಟಕ ಆಯಿಲ್ ಫ್ಯಾಕ್ಟರಿ ಏರಿಯಾ, ಕಾರಿಗನೂರ, ಜಂಬುನಾಥ ಹಳ್ಳಿ, ಕಾರಿಗನೂರು, ಮಾರುತಿ ಕಾಲೋನಿ, ಸಂಕ್ಲಾಪುರ, ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net