ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Electricity
Published on

ಹೊಸಪೇಟೆ : ಸಂಕ್ಲಾಪುರ ವಿದ್ಯುತ್ (110/11 ಕೆವಿ) ವಿತರಣಾ ಕೇಂದ್ರದಲ್ಲಿ ಪ್ರೊವೈಡಿಂಗ್ ಸ್ಪೇರ್ 1*10 ಎಂವಿಎ ಪವರ್ ಟ್ರಾನ್ಸ್ಫಾರ್ಮರ್ ವರ್ಕ್ ಮತ್ತು ಇತರೆ ದುರಸ್ತಿ ಕಾರ್ಯ ಇರುವುದರಿಂದ ಇಂದು 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಅಂದು ಸದರಿ ವಿದ್ಯುತ್ ವಿತರಣಾ ಕೇಂದ್ರ ಹೊರಡುವ 11ಕೆವಿ ಫಿಡರ್‌ಗಳಾದ ಸಿಟಿ, ಜಂಬುನಾಥ ಗುಡಿ, ಕೆಓಎಫ್, ಎಂಪಿ ಪ್ರಕಾಶ, ವಿಜಯನಗರ, ಸಂಕ್ಲಾಪುರ, ಟಿಎಸ್‌ಪಿ, ಎನ್‌ಸಿ ಕಾಲೋನಿ, ರಾಜಪುರ (ಎನ್‌ಜೆವಾಯ್), ಬಸವನ ದುರ್ಗಾ(ಎನ್‌ಜೆವಾಯ್), ಬಿವಿ ಗೆರೆ(ಐಪಿ), ಕಲ್ಲಹಳ್ಳಿ(ಐಪಿ), ಎಫ್-17 ವಡ್ಡರಹಳ್ಳಿ ವ್ಯಾಪ್ತಿಗೆ ಒಳಪಡುವ ಸುತ್ತಲಿನ ಪ್ರದೇಶಗಳಾದ ಬಳ್ಳಾರಿ ರೋಡ, ಸಿರ್ಸಿನ್‌ಕಲ್ಲು, ನಿಯಾಜಿ ನಗರ, ಅಜಾದ್ ನಗರ ಈಶ್ವರ ನಗರ, ಉಕ್ಕಡಕೆರೆ, ಜೆ.ಪಿ.ನಗರ, ಅರವಿಂದ ನಗರ, ಬಸ್ ಡಿಪೊ ಏರಿಯಾ, ಸಾಯಿ ಕಾಲೋನಿ, ಕೊಂಡನಾಯಕನ ಹಳ್ಳಿ, ಅನಂತಶಯನಗುಡಿ, ಸಂಕ್ಲಾಪುರ ಇಂಡಸ್ಟಿçಯಲ್ ಏರಿಯಾ, ಕರ್ನಾಟಕ ಆಯಿಲ್ ಫ್ಯಾಕ್ಟರಿ ಏರಿಯಾ, ಕಾರಿಗನೂರ, ವಿನಾಯಕ ನಗರ, ಆಕಾಶವಾಣಿ, ಪಾರ್ವತಿನಗರ, ವಾಲ್ಮೀಕಿ ನಗರ, ಸಂಡೂರು ರೋಡ್, ರಾಮಾ ಟಾಕೀಸ್ ಏರಿಯಾ, ಚಲುವಾದಿ ಕೇರೆ, ಉಕ್ಕಡಕೆರೆ, ಚಿತ್ತರ ಕೆರೆ, ಮ್ಯಾಸ ಕೆರೆ, ಬಾಣದ ಕೆರೆ, ಜಂಬುನಾಥ ಹಳ್ಳಿ, ಕಾರಿಗನೂರು, ಮಾರುತಿ ಕಾಲೋನಿ, ಸಂಕ್ಲಾಪುರ, ಸಾಯಿಬಾಬಾ ಗುಡಿ ಏರಿಯಾ, ಡ್ಯಾಮ ರೋಡ್, ಟಿ ಬಿ ಡ್ಯಾಮ್, ಎನ್ ಸಿ ಕಾಲೋನಿ, ಗಾಂಧೀ ಕಾಲೋನಿ, ಗೋಕುಲ ನಗರ, ನಿಶಾನಿ ಕ್ಯಾಂಪ್, ಕಲ್ಲಹಳ್ಳಿ, ರಜಾಪುರ, ಜಿ.ಜಿ ಕ್ಯಾಂಪ್, ಕಣಿವೆ ರಾಯನಗುಡಿ, ವ್ಯಾಸನಕೇರೆ, ಕಾಕುಬಾಳು, ಗುಡ್ಲುವದ್ದಿಗೇರೆ, ಪಿ.ಕೆ ಹಳ್ಳಿ, ಸಂಕ್ಲಾಪುರ, ನಾಗೇನಹಳ್ಳಿ, ಬಸವನದುರ್ಗ, ಹೊಸುರು, ಇಪ್ಪಿತ್ತೇರಿ ಮಾಗಣಿ, ನರಸಾಪುರ, 118 ಡಣಾಪುರ, ಶುಭ್‌ಲಾಭ್ ಕೈಗಾರಿಕೆಗಳು ಸೇರಿದಂತೆ ವಡ್ಡರಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು, ಗ್ರಾಹಕರು ಸಹಕರಿಸಬೇಕು ಎಂದು ಜೆಸ್ಕಾಂನ ಕಾರ್ಯ ಮತ್ತು ಪಾಲನೆ ನಗರವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net