ನಾಳೆ ಗ್ರಾಹಕರ ಸಂವಾದ ಸಭೆ

Published on

ಹೊಸಪೇಟೆ: ಹೊಸಪೇಟೆ ನಗರ ಉಪವಿಭಾಗ-1ರ ಕಚೇರಿಯಲ್ಲಿ ನ.16ರಂದು ಮಧ್ಯಾಹ್ನ 3.30 ರಿಂದ 5 ರವರೆಗೆ ಗ್ರಾಹಕ ಸಂವಾದ ಸಭೆ ನಡೆಯಲಿದೆ.

ನಗರ ಉಪವಿಭಾಗ-1 ಮತ್ತು ನಗರ ಉಪವಿಭಾಗ-2 ರ ಗ್ರಾಹಕರ ಕುಂದು ಕೊರತೆ ಹಾಗೂ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ತಿಂಗಳು ಗ್ರಾಹಕರ ಸಂವಾದ ಸಭೆ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಸಭೆಗೆ ಭಾಗವಹಿಸಿ ತಮ್ಮ ಕುಂದು ಕೊರತೆ ಬಗೆಹರಿಸಿಕೊಳ್ಳಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net