ವಿದ್ಯುತ್‌ ತಂತಿ ತಗುಲಿ ಎಮ್ಮೆ, ಕರು ಸಾವು

Published on

ಹೊಸಪೇಟೆ: ಜೆಸ್ಕಾಂ ಇಲಾಖೆ ನರ‍್ಲಕ್ಷ್ಯದಿಂದ ವಿದ್ಯುತ್‌ ಕಂಬದ ತಂತಿ ತಗುಲಿ ಎಮ್ಮೆ ಮತ್ತು‌ ಕರು ಸತ್ತುಹೋದ ಘಟನೆ ನಗರದ ಕೊಂಡನಾಯಕನಹಳ್ಳಿ ಬಳಿ ಭಾನುವಾರ ನಡೆದಿದೆ.

ಗೂಗಿ ಪ್ರಕಾಶ್ ಎಂಬವರಿಗೆ ಸೇರಿದ ಎಮ್ಮೆಗಳು. ಸಂಪರ‍್ಣ ಶಿಥಿಲಗೊಂಡಿದ್ದ ವಿದ್ಯುತ್‌ ಕಂಬ ತುಂಡಾಗಿ ಕೆಳಗೆ ಬಿದ್ದ ಪರಿಣಾಮ ಮೇಯಲು ತೆರಳಿದ್ದ ಎರಡು ಎಮ್ಮೆಗಳು ಸದರಿ ವಿದ್ಯುತ್‌ ಕಂಬದ ತಂತಿಗೆ ಸ್ರ‍್ಶಿಸಿ ಅಸುನೀಗಿವೆ.

ವಿದ್ಯುತ್‌ ಕಂಬ ಸಂಪರ‍್ಣ ಶಿಥಿಲಗೊಂಡಿದ್ದ ಬಗ್ಗೆ ಆಗಾಗ್ಗೆ ಜೆಸ್ಕಾಂನವರ ಗಮನಕ್ಕೆ ತರಲಾಗಿತ್ತು. ಆದರೆ ಈ ಕುರಿತು ಕಾಳಜಿ ವಹಿಸದ ಕಾರಣ ಈಗ ವಿದ್ಯುತ್‌ ಕಂಬ ತುಂಡಾಗಿ ಬಿದ್ದಿದೆ. ಇದರಿಂದ ಎಮ್ಮೆ ಮತ್ತು ಕರು ಮೃತಪಟ್ಟಿವೆ. ನಿತ್ಯ ಹಾಲು ಕೊಡುವ ಎಮ್ಮೆ ಕುಟುಂಬಕ್ಕೂ ಆಸರೆಯಾಗಿತ್ತು ಎಂದು ಗೂಗಿ ಪ್ರಕಾಶ್ ಅವರ ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net