

ಹೊಸಪೇಟೆ: ಹರಪನಹಳ್ಳಿ, ಕೂಡ್ಲಿಗಿ, ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದ್ದಾರೆ.
ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಪಂಗೆ ಚುನಾವಣಾಧಿಕಾರಿಯಾಗಿ ಶರ್ಮತ್ ಐ.ಕಣದಮನಿ, ಸಹಾಯಕರಾಗಿ ಎಲ್.ಲಚಮಾನಾಯ್ಕ, ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಪಂಗೆ ಚುನಾವಣಾಧಿಕಾರಿಯಾಗಿ ಗೋವಿಂದಪ್ಪ, ಸಹಾಯಕರಾಗಿ ಮಂಜುನಾಥ, ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಪಂಗೆ ಚುನಾವಣಾಧಿಕಾರಿಯಾಗಿ ಕೆ.ಪ್ರದೀಪ್, ಸಹಾಯಕರಾಗಿ ಎಂ.ಮAಜುನಾಥ, ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಪಂಗೆ ಚುನಾವಣಾಧಿಕಾರಿಯಾಗಿ ಎಂ.ಎಸ್.ಗುರುಬಸವರಾಜ, ಸಹಾಯಕರಾಗಿ ಎನ್.ವಿ.ಶಿವಲಿಂಗಸ್ವಾಮಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡೆನಹಳ್ಳಿ ಗ್ರಾಪಂಗೆ ಅಕ್ಕಿಬಸವರಾಜ, ಡಿ.ರೇವಪ್ಪ ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.