

ಹೊಸಪೇಟೆ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ವಿಜಯನಗರ ಜಿಲ್ಲಾಢಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ತಾಲೂಕಿನ ನಾಗೇನಹಳ್ಳಿ 4ನೇ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ನಿಮಿತ್ತ 5ನೇ ಹಂತದ ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳ ಮೂರು ದಿನಗಳ ತರಬೇತಿ ಕಾರ್ಯಗಾರ ನಡೆಯಿತು.
ಸಿಡಿಪಿಒ ಸಿಂಧೂ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ 3 ರಿಂದ 6 ವರ್ಷದ ಮಕ್ಕಳ ಕಲಿಕೆಯನ್ನು, ಆಟಗಳ ಮತ್ತು ಚಟುವಟಿಕೆಗಳನ್ನು ಕಲಿಸಲು ಅಂಗನವಾಡಿ ಮೇಲ್ವಿಚಾರಕಿಯರಿಗೆ ಸಾಮರ್ಥ್ಯಾಭಿವೃದ್ಧಿಗೊಳಿಸಲಾಗುತ್ತಿದೆ. ಮೇಲ್ವಿಚಾರಕಿಯರಿಂದಲೇ ಕಾರ್ಯಕರ್ತೆರಿಗೆ ಸಾಮರ್ಥ್ಯವನ್ನು ವೃದ್ಧಿಸಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಹಾಗೂ ಗುಣಾತ್ಮಕ ಶಾಲಾಪೂರ್ವ ಶಿಕ್ಷಣವನ್ನು ನೀಡುವಲ್ಲಿ ಸಮರ್ಥರಾಗಿದ್ದಾರೆ. ಮಕ್ಕಳ ಪೋಷಕರ ಅಭಿಲಾಶೆಯಂತೆ ಈ ತರಬೇತಿಯಲ್ಲಿ ಅಕ್ಷರ ಅಭ್ಯಾಸ ಚಟುವಟಿಕೆಯನ್ನು ಸಹ ಮಕ್ಕಳಿಗೆ ಕಲಿಸುವ ಚಟುವಟಿಕೆಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುತ್ತಿದ್ದಾರೆ ಎಂದರು.
ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ವ್ಯವಸ್ಥಾಪಕ ಕೊಟ್ರೇಶ ಯರಡಕೇರಿ, ಮೇಲ್ವಿಚಾರಕಾರದ ಅಂಬುಜ, ಎಲ್.ಡಿ.ನಧಾಫ್, ಪ್ರಮೀಳ ಪಾಟಿಲ್ ಇತರರಿದ್ದರು.