ಇ-ಶ್ರಮ್ ಕಾರ್ಮಿಕರಿಗೆ ಪಡಿತರ ನೀಡಲು ಅವಕಾಶ

07 MANJU 01
Published on

ಹೊಸಪೇಟೆ: ಇ-ಶ್ರಮ್ ಯೋಜನೆಯ ನೊಂದಾಯಿತ ಕಾರ್ಮಿಕರಿಗೆ ಆದ್ಯತಾ ಮೇರೆಗೆ ಪಡಿತರ ಕಾರ್ಡ್ ನೀಡಲು ಅಹಾರ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅಸಂಘಟಿತ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತೆ ಓದಗಿಸುವ ಇ-ಶ್ರಮ್ ಯೋಜನೆಯ ನೊಂದಾಯಿತರು ಒಟ್ಟು ಜಿಲ್ಲೆಯಲ್ಲಿ 77290 ಕಾರ್ಮಿಕರು ಇದ್ದಾರೆ. ಇವುಗಳಲ್ಲಿ 420 ಕಾರ್ಮಿಕರಿಗೆ ಪಡಿತರ ಕಾರ್ಡ್ಗಳು ಲಭ್ಯತೆಯಿಲ್ಲ ಎಂದು ಗುರುತಿಸಲಾಗಿದೆ. ಅಂತಹ 91 ಕಾರ್ಮಿಕರಿಗೆ ಈಗಾಗಲೇ ಪಡಿತರ ಕಾರ್ಡ್ಗಳನ್ನು ನೀಡಲಾಗಿದೆ. ಉಳಿದ 329 ಕಾರ್ಮಿಕರಿಗೆ ಪಡಿತರ ಕಾರ್ಡ್ ಸೌಲಭ್ಯ ಪಡೆಯಲು ಆಯಾ ತಾಲೂಕಿನ ತಹಸೀಲ್ದಾರ್ ಸೂಚಿಸಲಾಗಿದೆ. ಪಡಿತರವಿಲ್ಲದ ಇ-ಶ್ರಮ್ ನೊಂದಾಯಿತ ಕಾರ್ಮಿಕರು ಕೂಡಲೇ ಸ್ಥಳೀಯ ಅಹಾರ ಇಲಾಖೆಯಲ್ಲಿ ಪಡಿತರ ಸೌಲಭ್ಯವನ್ನು ಪಡೆಯಬೇಕು ಎಂದರು.

ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಅಹಾರ ಇಲಾಖೆ ಉಪನಿರ್ದೇಶಕ ರಿಯಾಜ್, ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net