ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಿ

28 MANJU 04
Published on

ಹೊಸಪೇಟೆ: ವಿಭಾಗಿಯ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಅವ್ಯವಸ್ಥೆಯಿಂದ ರೋಗಿಗಳು ಬವಣೆ ಪಡುವಂತಾಗಿದೆ ಎಂದು ಆಗ್ರಹಿಸಿ ಡಿವೈಎಫ್‌ಐ ಸಂಘಟನೆಯಿAದ ನಗರದ ಎಂಸಿಎಚ್ ಆಸ್ಪತ್ರೆ ಮುಂದೆ ಶನಿವಾರ ಪತ್ರಿಭಟನೆ ನಡೆಯಿತು.

ಉಪವಿಭಾಗಿಯ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿದ್ದರೂ ಆದರೂ, ಅದು ಪ್ರಯೋಜನವಾಗಿಲ್ಲ. ಹೆಸರಿಗೆ ಮಾತ್ರ ಕಾಮಗಾರಿ ನೆಡದಿದೆ. ರಕ್ತ ಪರೀಕ್ಷೆ ಘಟಕದಲ್ಲಿ ಸಿಬಿಸಿ ಯಂತ್ರ ಇಲ್ಲದೇ ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಯ ಖಾಯಂ ಸಿಬ್ಬಂದಿಗಳು ರೋಗಿಗಳ ಜತೆಯಲ್ಲಿ ವಿನಯ ಪ್ರೀತಿಯಿಂದ ನೆಡೆದು ಕೊಳ್ಳದೆ ಅಸಭ್ಯವಾಗಿ ವರ್ತನೆ ನಡೆದುಕೊಳ್ಳುತ್ತಾರೆ. ರೋಗಿಗಳನ್ನ ಸರಿಯಾಗಿ ಪರೀಕ್ಷಿಸದೆ ನೆರೆ ಜಿಲ್ಲೆಯಲ್ಲಿ ಸಾಗಿಸುವ ಪ್ರವೃತ್ತಿ ಬೆಳಿದೆದೆ. ಎಷ್ಟೋ ರೋಗಿಗಳು ಮಾರ್ಗದ ಮಧ್ಯದಲ್ಲೇ ಸಾವನ್ನಪ್ಪುತ್ತಿದ್ದಾರೆ. ಈ ನೀತಿ ಬದಲಾವಣೆ ಆಗಬೇಕಿದೆ ಎಂದು ಆಗ್ರಹಿಸಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಬಂದ ಕುಟುಂಬದ ಬಳಿ ಹಣದ ಬೇಡಿಕೆ ಇಡುತ್ತಾರೆ. ಮಾನವೀಯತೆ ಇಲ್ಲದೆ ವೈದ್ಯರು ನೆಡೆದುಕೊಳ್ಳುತ್ತಿದ್ದಾರೆ. ಬ್ರೂಣ ಹತ್ಯೆ ಜೋರಾಗಿಯೇ ನೆಡೆಯುತ್ತಿದೆ. ಪ್ರತಿನಿಧಿ, ವೈದ್ಯಧಿಕಾರಿಗಳ ಗಮನಕ್ಕಿದ್ದರೂ ತಿಳಿಯದಂತೆ ವರ್ತಿಸುತ್ತಿದ್ದಾರೆ. ಖಾಲಿ ವೈದ್ಯರು, ಲ್ಯಾಬ್ ಟೆಕ್ನಿಷಿಯನ್ ನೇಮಕ ಹಾಗೂ ಸಿಬ್ಬಂಧಿ ನೇಮಕ ಮಾಡಿಕೊಳ್ಳಬೇಕು. ಬಸವಣ್ಣ ಕಾಲುವೆಯಲ್ಲಿ ಪತ್ತೆಯಾಗಿದ 07 ಬ್ರೂಣಗಳ ತನಿಖೆಯಾಗ ಬೇಕು. ಪುನೀತ್ ರಾಜಕುಮಾರ ಹೆಸರಲ್ಲಿ ಹೃದಯ ರೋಗದ ಆಸ್ಪತ್ರೆ ತೆರೆಯಬೇಕು. ಜನ ಸಂಖ್ಯೆ ತಕ್ಕಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ಕುಡಿವ ಶೌಚಾಲಯ ವ್ಯವಸ್ಥೆ ಮಾಡÀಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಈಡಿಗರ ಮಂಜುನಾಥ, ವಿ.ಸ್ವಾಮಿ, ಯಲ್ಲಲಿಂಗ, ಬಂಡೆ ತಿರುಕಪ್ಪ, ಅಲ್ತಾಫ್, ದಿವಾಕರ್, ಅಂಬರೀಶ್, ಮಾಲತೇಶ್, ರೆಹಮಾನ್, ಸೂರಿ ಮಂಜುನಾಥ, ಸುಧಾಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net