

ಹೊಸಪೇಟೆ: ಅಸಮಾನತೆ ಮತ್ತು ಶ್ರೇಣೀಕೃತ ವ್ಯವಸ್ಥೆಯಿಂದಾಗಿ ಹಿಂದು ಧರ್ಮದಲ್ಲಿ ಇರುವವರು ಒಂದಾಗಲು ಸಾಧ್ಯವಿಲ್ಲ ಎಂದು ಸೌಹಾರ್ದ ಕರ್ನಾಟಕ ಜಿಲ್ಲಾ ಸಂಚಾಲಕ ಎ.ಕರುಣಾನಿಧಿ ಹೇಳಿದರು.
ನಗರಸ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಸಂಜೆ ನಡೆದ ದಸರಾ ಸೌಹಾರ್ದ ಕವಿಗೋಷ್ಠಿಯಲ್ಲಿ ಮಾತನಾಡಿದರು. ಯಾರು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿಗಳು ಅಲ್ಲವೋ ಅವರೆಲ್ಲಾ ಹಿಂದುಗಳು ಎಂದು ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿದೆ. ಆದರೆ ಧರ್ಮದ ಒಳಗಿನ ಶ್ರೇಣೀಕೃತ ವ್ಯವಸ್ಥೆ ಮತ್ತು ಅಸಮಾನತೆ ಮುಂದುವರೆದಿದ್ದು ಜಾತಿ ಪದ್ಧತಿ ನಾಶವಾಗದ ಹೊರತು ಹಿಂದುಗಳು ಒಂದಾಗಲು ಸಾಧ್ಯವಿಲ್ಲ. ಪ್ರಸ್ತುತ ಮತೀಯವಾದಿಗಳು ತಮ್ಮ ಕೋಮುವಾದಿ ಅಜೆಂಡಾವನ್ನು ಹೇರುವಿಕೆಯ ಭಾಗವಾಗಿ ಹಿಂದುಗಳು ಒಂದಾಗಬೇಕು ಎಂದು ಹೇಳುತ್ತಿದ್ದಾರೆ. ಇದರ ಹಿಂದಿನ ರಾಜಕೀಯ ಪಿತೂರಿಯನ್ನು ಅರ್ಥಮಾಡಿಕೊಳ್ಳದೇ ಇದ್ದಲ್ಲಿ ಭಾರತೀಯ ಪ್ರಜೆಗಳು ಅದರಲ್ಲೂ ವಿಶೇಷವಾಗಿ ಶೋಷಿತ ಮತ್ತು ಶ್ರಮ ಸಂಸ್ಕೃತಿಯ ಜನರು ದಾರಿತಪ್ಪುವ ಎಲ್ಲಾ ಅಪಾಯಗಳಿವೆ. ಈ ನಿಟ್ಟಿನಲ್ಲಿಯೇ 12ನೇ ಶತಮಾನದ ಶರಣರು ದೇಗುಲ ಸಂಸ್ಕೃತಿಗಿAತ ಶ್ರಮ ಸಂಸ್ಕೃತಿಗೆ ಹೆಚ್ಚು ಒತ್ತು ನೀಡಿದರು. ಮಾತ್ರವಲ್ಲ ಆರ್ಥಿಕ ಕ್ರೂಢೀಕರಣದ ವಿರುದ್ಧ ಕ್ರಾಂತಿಯನ್ನುAಟು ಮಾಡಿದರು ಎಂದರು. ಉಪನ್ಯಾಸಕ ಡಾ.ದಯಾನಂದ ಕಿನ್ನಾಳ್ ಮಾತನಾಡಿ, ಕವಿಗಳು ಮೊದಲು ಕಿವಿಗಳಾಗÀಬೇಕು. ಹಿರಿಯ ಕವಿಗಳ ಅಥವಾ ಪ್ರಸ್ತುತ ಮನಮುಟ್ಟುವಂತೆ ಬರೆಯುವವರ ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ಮತ್ತು ತಮಗಿಷ್ಟವಾದುದ್ದನ್ನು ಓದುಗರಿಗೆ ಮನನವಾಗುವಂತೆ ಬರೆಯುವ ರೂಢಿ ಮಾಡಿಕೊಳ್ಳಬೇಕು. ಹೇಳುವ ವಿಷಯ ಪ್ರಸ್ತುತೆಗೆ ಹತ್ತಿರವಾಗಿರಬೇಕು ಎಂದರು.
ಉಪನ್ಯಾಸಕ ಡಾ.ದಯಾನಂದ ಕಿನ್ನಾಳ್, ಹಿರಿಯ ಕವಿ ಎ.ಎಂ.ಬಸವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ನಿಕಟಪೂರ್ವಾ ಅಧ್ಯಕ್ಷ ಡಾ.ಎತ್ನಳ್ಳಿ ಮಲ್ಲಯ್ಯ, ಕವಿಯತ್ರಿ ನೂರ್‌ಜಹಾನ್ ಇದ್ದರು.