

ಹೊಸಪೇಟೆ: ಒತ್ತಡದ ಕೆಲಸದಿಂದ ಹಲವರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯದ ಕಾಳಜಿಯ ಕುರಿತು ಎಲ್ಲರೂ ಯೋಚಿಸಬೇಕಾಗಿದೆ ಎಂದು ಜಿ.ಪಂ. ಸಿಇಒ ನೋಂಗ್ಟಾಯ್ ಮೊಹಮದ್ ಅಲಿ ಅಕ್ರಮ್ ಶಾ ಹೇಳಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಸೇರಿದಂತೆ ಇತರೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಡಿಎಚ್‌ಒ ಕಚೇರಿಯ ಆವರಣದಲ್ಲಿ ಗುರುವಾರ ಜಾಗೃತಿ ಜಾಥಾಕ್ಕೆ ಜಾಲನೆ ನೀಡಿ ಮಾತನಾಡಿದರು. ದೈಹಿಕ, ಮಾನಸಿಕ, ಸಾಮಾಜಿಕ, ಜೀವನ ಶೈಲಿಗಳು ಪರಿಪೂರ್ಣವಾಗಿದ್ದ ವ್ಯಕ್ತಿಯನ್ನು, ಆರೋಗ್ಯವಂತ ವ್ಯಕ್ತಿ ಎನ್ನಬಹುದು ಎಂದರು.
ಡಿಎಚ್‌ಒ ಎಲ್.ಆರ್.ಡಾ.ಶಂಕರ್ ನಾಯ್ಕ ಮಾತನಾಡಿ, ಕೆಲಸದ ಒತ್ತಡದಿಂದ ಹೆಚ್ಚಾಗಿ ಯುವಕರಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸಂಸಾರ, ಜೀವನದ ಒತ್ತಡದಿಂದ ಮಾನಸಿಕ ರೋಗಗಳಿಗೆ ತುತ್ತಾಗುತ್ತಿರುವವರಲ್ಲಿ ಮಧ್ಯ ವಯಸ್ಕರಿದ್ದಾರೆ. 11,065 ತೀವ್ರತರ ಮಾನಸಿಕ ರೋಗಿಗಳಲ್ಲಿ 5738 ಮಧ್ಯ ವಯಸ್ಕರಿದ್ದಾರೆ. ನಿದ್ದೆ ಊಟ, ಅಗೌರವ, ಜುಗುಪ್ಪೆ ಭಾವನೆಗಳಿಂದ ಕುಗ್ಗಿರುವ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅವಶ್ಯ ಇದ್ದು, ಶರೀರವನ್ನು ಕಾಡುವ ಕಾಯಿಲೆಗಳಂತೆ ಮಾನಸಿಕ ರೋಗದಲ್ಲೂ ಇವೆ ಎಂದರು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ರಾಧಿಕಾ ಪ್ರಾಸ್ತವಿಕ ಮಾತನಾಡಿದರು. ನ್ಯಾಯಾಧೀಶರಾದ ಆರ್.ಎಚ್.ಅಶೋಕ್, ಜೆ.ಚೈತ್ರಾ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ, ವೈದ್ಯಾಧಿಕಾರಿಗಳಾದ ಡಾ.ಜಗದೀಶ ಪಾಟ್ಟೆ, ಡಾ.ಷಣ್ಮುಖ ನಾಯ್ಕ, ಡಾ.ಡಿ.ಭಾಸ್ಕರ್ ಇತರರಿದ್ದರು.