ಮಾದಕ ವಸ್ತುಗಳ ದುಷ್ಪರಿಣಾಮ ಯುವಕರು ಅರಿಯಲಿ

15 MANJU 06
Published on

ಹೊಸಪೇಟೆ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸೇರಿದಂತೆ ಇತರೆ ಇಲಾಖೆಗಳಿಂದ ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಮಂಗಳವಾರ ಮಾದಕ ವಸ್ತುಗಳ ದುರ್ಬಳಕೆಯ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಹಾಗೂ ಏನ್‌ಡಿಪಿಎಸ್ ಕಾಯ್ದೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮಾನ ಎ.ನಂದಗಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾದಕ ವಸ್ತುಗಳ ಸೇವನೆಗೊಮ್ಮೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಮದ್ಯಪಾನ, ಧೂಮಪಾನದಂತಹ ದುಶ್ಚ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ ಎಂಬುದನ್ನು ತಿಳಿಹೇಳಬೇಕಿದೆ ಎಂದರು.

ಕಾಲೇಜಿನ ಅಧ್ಯಕ್ಷ ಎನ್.ಮಲ್ಲಿಕಾರ್ಜುನ ಮೆಟ್ರಿ ಅಧ್ಯಕ್ಷತೆ ವಹಿಸಿದರು. ಎಸ್ಪಿ ಬಿ.ಎಲ್.ಶ್ರೀ.ಹರಿಬಾಬು, ಕಾಲೇಜಿನ ಪ್ರಾಧ್ಯಾಪಕ ಡಿ.ರವಿಕಿರಣ, ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪುರ, ಜಿ.ಸಂಜೀವ್ ಕುಮಾರ, ಹೇಮಲತಾ ಬಿ ಹುಲ್ಲೂರ್, ರಮೇಶ್ ಬಾಬು, ಜೆ.ಚೈತ್ರ, ಶ್ರುತಿ ತೇಲಿ, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ್ ಮೂರ್ತಿ, ವೈದ್ಯ ಡಾ.ಸೋಮಶೇಖರ, ಕಾಲೇಜಿನ ಪ್ರಾಂಶುಪಾಕ ಡಾ.ಎಂ.ಪ್ರಭುಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net