

ಹೊಸಪೇಟೆ: ಮದ್ಯಪಾನ ಮತ್ತು ಮಾದಕ ವಸ್ತುಗಳ ದುರುಪಯೋಗ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು.
ನಶಾಮುಕ್ತ ಭಾರತ ಅಭಿಯಾನದ ನಿಮಿತ್ತ ಬಂಡಿಪುರದಿAದ ಬೀದರ್‌ಗೆ ಹಮ್ಮಿಕೊಂಡ ಬೈಕ್ ಜಾಥಾಕ್ಕೆ ಸ್ವಾಗತಿಸಿ, ನಂತರ ನಗರದ ವಿಜಯನಗರ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ವಿದ್ಯಾರ್ಥಿಗಳಿಗೆ ನಿಗಧಿತ ಗುರಿ ತಲುಪಲು ಪರಿಶ್ರಮ ಬಹಳ ಮುಖ್ಯ. ಇದಕ್ಕಾಗಿ ಮದ್ಯ ಮತ್ತು ಮಾದಕ ವಸ್ತುಗಳ ಮೋಹಕ್ಕೆ ಸಿಲುಕಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ನಿಯಂತ್ರಣ ಮಾಡುವ ಶಕ್ತಿ ಅರಿತರೇ, ಭವಿಷ್ಯದಲ್ಲಿನ ನಿಗಧಿತ ಗುರಿ ಸಾಧನೆ ಬಹುಸುಲಭ. ಎಂದರು.
ಎನ್‌ಎಸ್‌ಎಸ್ ರಾಜ್ಯ ಅಧಿಕಾರಿ ಡಾ.ಪ್ರತಾಪಲಿಂಗಯ್ಯ ಮಾತನಾಡಿ, ದೇಶದಲ್ಲಿ ಹೆಚ್ಚು ಯುವಕರನ್ನು ಹೊಂದಿದ ದೇಶ ಭಾರತ. ರಾಷ್ಟಿçÃಯ ವರದಿ ಪ್ರಕಾರ ದೇಶದಲ್ಲಿ 25 ಕೋಟಿ ಜನರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿದ್ದಾರೆ. ಅದರಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಶೇ.40 ರಷ್ಟು ಇದ್ದಾರೆಂಬ ಮಾಹಿತಿ ಇದೆ. ವಿದ್ಯಾರ್ಥಿ ದಿಸೆಯಿಂದಲೇ ಕ್ರೀಡಾ ಚಟುವಟಿಕೆಗಳಿಗೆ ಆಸಕ್ತಿ ವಹಿಸಿದರೇ ಮಾದಕ ವಸ್ತುಗಳಿಗೆ ವ್ಯಸನರಾಗುವ ಪ್ರಮಾಣ ತಗ್ಗಲಿದೆ. ಪಾಲಕರ ಪೋಷಣೆ ಮತ್ತು ಸಾಮಾಜಿಕ ಜವಾಬ್ದಾರಿ ಅರಿತು ಬದುಕಲು ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕಿದೆ. ಯುವಕರು ಮಾದಕ ವಸ್ತುಗಳ ಮಾರಾಟ ಕಂಡರೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಇದರಿಂದ ಕಾನೂನು ಕ್ರಮ ವಹಿಸಲಾಗುತ್ತದೆ ಎಂದರು.
ಕರ್ನಲ್ ಜಗದೀಪ್ ಸಿಂಗ್, ಕರ್ನಲ್ ಯಶವಂತ್ ಸಿಂಗ್, ಡಾ.ಅಭಿನವ್, ಡಾ.ವಿಶ್ವಜಿತ್ ನಾಯಕ್, ಎನ್.ಅಭಿಷೇಕ್ ಶೆಟ್ಟಿ, ಸುಹಾಸ್ ನರೇಂದ್ರ, ಸೈಕ್ಲಿಂಗ್ ರೈಡರ್ ನಂದಿನಿ ವಿಥುನ್, ಜೆಸ್ಸಿಕಾ, ರೇಣುಕಾ, ಮುಸ್ತಾಫಾ ಇತರರಿದ್ದರು.