ವ್ಯಸನ ಮುಕ್ತ ಸಮಾಜದ ಕನಸು ಕಾಣೋಣ

26 MANJU 01
Published on

ಹೊಸಪೇಟೆ: ಮಕ್ಕಳನ್ನ ನೋಡಿದ ಮೇಲೆ ದೇವರನ್ನ ನೋಡೋ ಅವಶ್ಯಕತೆ ಇಲ್ಲ. ದೇವರ ಗುಡಿ, ಶಾಲೆ ಇದ್ದರೆ, ನಾನು ಶಾಲೆಗೆ ಹೋಗುವೆ ಎಂದು ಕೊಪ್ಪಳ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ವಿಜಯನಗರ ಜಿಲ್ಲಾ ಪೊಲೀಸ್, ನಗರಸಭೆಯಿಂದ ನಗರದ ಜಿಲ್ಲಾಕ್ರೀಡಾಂಗಣದಲ್ಲಿ ಗುರುವಾರ ಆರೋಜಿಸಿದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.

ಹಿರಿಯರು ಮನೆಗೆ ಕುಡಿದು, ಗುಟಕಾ ಹಾಕೊಂಡು ಬಂದರೆ, ನೀವೇ ಕೈ ಮುಗಿದು, ಇವೆಲ್ಲ ಬಿಟ್ಟು ಬಿಡಿ ಎಂದು ಹೇಳಿ. ಬೆಸ್ಟ್ ಟೀಚರ್, ಬೆಸ್ಟ್ ಫ್ಯೂಚರ್ ನೀವೆ. ದೊಡ್ಡವರಿಗೂ ಪಾಠ ಕಲಿಸಬಹುದು. ಒಳ್ಳೆಯ ಹಾವ್ಯಸ ಸುಖಕರ ಜೀವನ ರೂಪಿಸುತ್ತದೆ. ಕೆಟ್ಟದನ್ನು ಇದ್ದರೂ ಮನಸ್ಸು ಅದನ್ನೇ ಮಾಡಲು ಹೇಳುತ್ತೆ. (ಸರಾಯಿ, ಗುಡುಕ) ಗುಟ್ಕ್ ಹುಟ್ಕ್ ತಗೊಂಡರೆ ಒಂದಿನ ಗೊಟಕ್ ಆಗಿ ಗುಟಕ್ಕೆ ಕಟ್ಟಿತ್ತಾರೆ. ಮೊಬೈಲ್ ಸಮಾಜದಲ್ಲಿ ತಲೆ ತಗ್ಗಿಸುವಂತೆ ಮಾಡುತ್ತೆ. ಪುಸ್ತಕ ತಲೆ ಎತ್ತುವಂತೆ ಮಾಡುತ್ತದೆ ಎಂದರು.

ಮಕ್ಕಳು ಸಂಕಲ್ಪನ ಮಾಡಿದರೆ, ಆರುವ ದೀಪ ಕೂಡ ಬೆಳಗಿಸಬಹುದು. ವ್ಯಸನ ಮುಕ್ತಕ್ಕೆ ಕೇವಲ ಭಾಷಣ ಮಾಡಿ, ಹಿಂದಿನಿAದ ಅನುನತಿ ನೀಡುವ ಸರ್ಕಾರಗಳಿವೆ. ಜಾಗೃತಿ ಮಕ್ಕಳಲ್ಲಿ ಮಾತ್ರವಲ್ಲದೇ ಜನಪ್ರತಿನಿಧಿಗಳು ಸೇರಿದಂತೆ ಸಂಘ ಸಂಸAಸ್ಥೆಗಳಲ್ಲಿ ಕೂಡ ಜಾಗೃತಿ ಮೂಡಿ, ಕೈ ಜೋಡಿಸಿದರೆ ಮಾದಕಗಳನ್ನು ತಡೆಯ ಬಹುದು. ನೋಡುವ ಜಾಗಕ್ಕಿಂತ ಜನ ವ್ಯಸನ ಮುಕ್ತರಾಗಬೇಕು. ಹಿರಿಯ ಆಸ್ತಿಗೆ ಹಕ್ಕಿನ ಬದಲಿಗೆ ಸಮಾಜಕ್ಕೆ ಆದರ್ಶ ಮಕ್ಕಳಾಗಿ ಎಂದರು.

ಚಲನಚಿತ್ರ ನಟ ಅಜಯ್ ರಾವ್ ಮಾತನಾಡಿ, ನನ್ನ ಹುಟ್ಟಿರಿನಲ್ಲಿ ಮಾತನಾಡುವ ತೃಪ್ತಿ ಬೇರೆಲ್ಲೂ ಸಿಗಲ್ಲ. ಗಿಡವಾಗಿ ಬಗದ ಮರವಾಗಿ ಬಗ್ಗಿತೆ ಎಂಬ ಗಾದೆಯನ್ನು ಮಕ್ಕಳು ಅರೆಯಬೇಕು. ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕಿದೆ. ಜೀವನದ ಪಯಣದಲ್ಲಿ ತಪ್ಪು ಸರಿಗಳನ್ನು ಮನವರಿಕೆ ಮಾಡಿಕೊಳ್ಳಬೇಕು. ಮನಸ್ಸು ಹಿಡಿತದಲ್ಲಿ ಇರಿಸಿ. ಯೋಗ, ವ್ಯಾಯಮ ಮಾಡಿ. ಮೊಬೈಲ್ ಮಾದಕ ವಸ್ತುಗಳಿಂದ ದೂರವಿದ್ದು ಉತ್ತಮ ಜೀವನ ರೂಪಿಸಿಕೊಳ್ಳಿ. ಮಾದಕ ವಸ್ತುಗಳನ್ನು ತಡೆಯಲು ಪ್ರತಿಯೊಬ್ಬರೂ ಕೈ ಜೋಡಿಸಿದರೆ ಮಾತ್ರ. ಸಿನಿಮಾಗಳಲ್ಲಿ ಜಾಗೃತಿಕ ಮೂಡಿಸುವ ಪ್ರಯತ್ನ ಮಾಡುವೆ ಎಂದರು.

ಎಸ್ಪಿ ಬಿ.ಎಲ್.ಶ್ರೀಹರಿಬಾಬು, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಆರ್ ಸಿಎಚ್ ಜಂಬಯ್ಯನಾಯಕ, ಪ್ರಭಾರ ಡಿಡಿಪಿಯು ನಾಗರಾಜ್ ಬಿ.ಹವಾಲ್ದಾರ್, ಡಿವೈಎಸ್ಪಿ ಟಿ.ಮಂಜುನಾಥ, ಜಿ.ವಿ.ನಾರಾಯಣ ರೆಡ್ಡಿ, ಪ್ರಕಾಶ್ ಶಾನಭಾಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net