

ಕೂಡ್ಲಿಗಿ (ವಿಜಯನಗರ): ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಕಾರಣಕ್ಕೆ ಕೂಡ್ಲಿಗಿ ಠಾಣೆ ಮುಖ್ಯ ಪೇದೆ ಮಂಜುನಾಥ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಯುಗಿರಿ ಅಮಾನತುಗೊಳಿಸಿದ್ದಾರೆ.
ಕೊಟ್ಟೂರು ತಾಲೂಕಿನ ಗಜಾಪುರ ಬಳಿ ಆ.7ರಂದು ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ತಾಕಿದೆ ಎಂದು ಆರೋಪಿಸಿ ಮಂಜುನಾಥ ಅವರು ಬಸ್ ಚಾಲಕ ರಾಮಲಿಂಗಪ್ಪಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು. ಘಟನೆಗೆ ಸಂಬಂಧಿಸಿ ರಾಮಲಿಂಗಪ್ಪ ದೂರಿನ ಆಧಾರದ ಮೇಲೆ ಮಂಜುನಾಥ ವಿರುದ್ಧ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.