

ಹೊಸಪೇಟೆ: ತುರ್ತು ಸಂದರ್ಭದAತಹ ಪರಿಸ್ಥಿತಿಯಲ್ಲಿ ತಕ್ಷಣ ಚಿಕಿತ್ಸೆ ದೊರೆತರೆ ಒಂದೊAದು ಅಮೂಲ್ಯ ಜೀವಗಳನ್ನು ಉಳಿಸಬಹುದು ಅಂತಹ ಸುವರ್ಣ ಸಮಯಕ್ಕೆ ಸೇವೆ ಸಲ್ಲಿಸಲು ಅಂಬುಲೆನ್ಸ್ ವಾಹನಗಳನ್ನು ನೀಡಿರುವ ಬಿ.ಎಂ.ಎA ಸಂಸ್ಥೆ ಕೊಡುಗೆ ನೀಡಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ನಡೆದ ಆರೋಗ್ಯ ಇಲಾಖೆಗೆ ಬಿಎಂಎA ಕಂಪನಿಯಿAದ ಆರೋಗ್ಯ ಇಲಾಖೆಗೆ ಡಾರ್ಮೆಂಟರಿ, ಲ್ಯಾಂಡ್ರಿ ಕಟ್ಟಡ ಹಾಗೂ ಆಂಬುಲೆನ್ಸ್ ಹಾಗೂ ವೈಕುಂಠ ವಾಹನಗಳ ಹಸ್ತಾಂತರ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದರು.
ಆಸ್ಪತ್ರೆಗೆ ಬರುವ ಒಳ ರೋಗಿಗಳ ಸಹಾಯಕರಿಗೆ ಡಾರ್ಮೆಂಟರಿ ಹೆಚ್ಚಿನ ಅನುಕೂಲವಾಗಲಿದೆ. ರೋಗಿಗಳ ಆರೈಕೆ ಮಾಡಲು, ಜತೆಯಾಗಿರಲು ಸಹಾಯವಾಗಲಿದೆ. ನಿತ್ಯ ಬಳಕೆಯ ಬಟ್ಟೆಗಳನ್ನು ಶುಚಿಗೊಳಿಸಿ ನೈರ್ಮಲ್ಯತೆಯನ್ನು ಕಾಪಾಡಲು ಆಧುನಿಕ ಯಂತ್ರೋಪಕರಣಗಳ ಅಳವಡಿಕೆಯ ಜತೆಗೆ ಲ್ಯಾಂಡ್ರಿ ಕೊಠಡಿ ನಿರ್ಮಾಣ ಮಾಡಲಾಗಿದೆ. ಎರಡೇರಡು ಆಂಬುಲೆನ್ಸ್ ಹಾಗೂ ವೈಕುಂಠ ವಾಹನಗಳನ್ನು ನೀಡಲಾಗಿದೆ. ಇವುಗಳ ನಿರ್ವಹಣೆ ಹಾಗೂ ಸೇವೆ ಬಹಳ ಮುಖ್ಯವಾಗಿದೆ ಎಂದರು.
ಸAಸದ ಈ.ಈ.ತುಕಾರಾಂ ಮಾತನಾಡಿ, ರಾಜ್ಯ ಸರ್ಕಾರ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತುನೀಡಿದೆ. ನಮ್ಮ ಸೇವೆ ಜನರಿಗೆ ಅನುಕೂಲ ಆಗಬೇಕು ಹೊರತು ನಮ್ಮ ಸ್ವಾತರ್ಥಕ್ಕೆ ಅಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡುವರೆ ಬರುತ್ತಾರೆ. ಆದ್ದರಿಂದ ಅವರ ಸೇವೆ ಮಾಡಿ ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದರು.
ಹುಡಾ ಅಧ್ಯಕ್ಷ ಎಚ್‌ಎನ್.ಎಫ್.ಇಮಾನ್‌ನಿಯಾಜಿ, ಡಿ.ಎಚ್.ಒ. ಶಂಕರ್‌ನಾಯ್ಕ, ಬಿಎಂಎA ಮುಖ್ಯಸ್ಥ ಗಣೇಶ್ ಹೆಗಡೆ ಇತರರಿದ್ದರು.