ಜೆನ್ನಿ ಮಿಲ್ಕ್ ಕಂಪನಿ ಮಾಲೀಕನ ಬಂಧಿಸಿ

21 MANJU 05
Published on

ಹೊಸಪೇಟೆ: ರೈತರನ್ನು ವಂಚಿಸಿದ ಜನ್ನಿ ಮಿಲ್ಕ್ ಕಂಪನಿ ಮಾಲೀಕನನ್ನು ಬಂಧಿಸಿ, ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಹೊಸಪೇಟೆ ರೈತ ಸಂಘದಿAದ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪಗೆ ಶುಕ್ರವಾರ ಮನವಿ ಸಲ್ಲಿಸಿದರು.

ಜನ್ನಿ ಮಿಲ್ಕ್ (ಕತ್ತೆ ಹಾಲು) ಕಂಪನಿ ರೈತರಿಂದ ಹಣವನ್ನು ಸಂದಾಯ ಮಾಡಿಸಿಕೊಂಡು ವಂಚಿಸಿ ಪರಾರಿಯಾಗಿದ್ದಾರೆ. ಇದರಿಂದ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ಜನ್ನಿ ಮಿಲ್ಕ್ ಸಂಸ್ಥೆ ಮಾಲೀಕರನ್ನು ಬಂಧಿಸಿ, ಹಣ ಕಳೆದುಕೊಂಡ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಕಟಗಿ ಜಂಬಯ್ಯ, ಮುಖಂಡರಾದ ತಾರಿಹಳ್ಳಿ ಜಂಬಯ್ಯ, ಕಂಪಲಕುಮಾರ್, ಗುಜ್ಜಲ ಕರಿಹನುಮ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net