ಕತ್ತೆ ಹಾಲಿನ ಮಾರುಕಟ್ಟೆ ತೆರೆಯಿರಿ

30 MANJU 02
Published on

ಹೊಸಪೇಟೆ: ಕತ್ತೆ ಹಾಲ ಮಾರಲು ಮಾರುಕಟ್ಟೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಜೆನ್ನಿ ಮಿಲ್ಕ್ ನೊಂದವರ ಸಂಘದಿAದ ನಗರದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಜೆನ್ನಿಮಿಲ್ಕ್ ಎಂಬ ಕಂಪನಿಯು ನಗರದದಲ್ಲಿ 6 ತಿಂಗಳಿನಿAದ ವ್ಯವಹಾರ ನಡೆಸಿದೆ. ತಮ್ಮ ಆದೇಶದ ಮೇರೆಗೆ ನಗರಸಭೆ ಅಧಿಕಾರಿಗಳು ಕಡತ ಪರಿಶೀಲನೆ ನಡೆಸಿದಾಗ ಟ್ರೇಡ್ ಲೈಸೆನ್ಸ್ ಇಲ್ಲವೆಂದು ಬೀಗ ಹಾಕಿದ್ದಾರೆ. ಆದರೆ ಕಂಪನಿಯ ಎಂ.ಡಿ. ಹಾಗೂ ಮ್ಯಾನೇಜರ್ ಹಾಗೂ ಕೆಲವು ಸಿಬ್ಬಂದಿಗಳು ಮೋಸ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ರೈತರು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಇದ್ದಾರೆ.

ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ತಾಲೂಕಿನ ಗಾಳೆಮ್ಮಗುಡಿ ಬಳಿ ಕಂಪನಿಯ ಸ್ಟಾಕ್ ಪಾಯಿಂಟ್ ಶೆಡ್ ನಿರ್ಮಾಣ ಮಾಡಿ, ಕತ್ತೆಗಳು ಹಾಗೂ ಮರಿಗಳು ಜಪ್ತಿ ಮಾಡಲಾಗಿದೆ. ಪಕ್ಕದಲ್ಲಿ ಇನ್ನೆರೆಡು ಶೆಡ್‌ಗಳಲ್ಲಿ ರೈತರ ಕತ್ತೆಗಳು ಹಾಗೂ ಮರಿಗಳು ಇರುತ್ತವೆ. ತನಿಖೆಯ ನೆಪದಲ್ಲಿ ಪೊಲೀಸರು ಶೆಡ್ ಸೀಜ್ ಮಾಡಿದ್ದಾರೆ. ಇದರಿಂದ ಕೂಡಿ ಹಾಕಿದ ಕತ್ತೆಗಳು ಹಾಗೂ ಮರಿಗಳು ನಿಂತಲ್ಲೆ ನಿಂತು ಆಹಾರ ಮೇವು ಹಾಗೂ ನಿರ್ವಹಣೆ ಕೊರತೆಯಿಂದ ಸಾಯುತ್ತಿವೆ. ಅವುಗಳನ್ನು ಮೇವು ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಬೇಕು.

ಕಂಪನಿಯ ಕತ್ತೆಗಳನ್ನು ಬಿಟ್ಟು ರೈತರ ಕತ್ತೆಗಳನ್ನು ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಅವರಿಗೆ ಕತ್ತೆಗಳನ್ನು ತೆಗೆದುಕೊಂಡು ಹೋಗಲು ಅನುವು ಮಾಡಿಕೊಡಬೇಕು. ಕಂಪನಿ ಮಾಡಿದ ಮೋಸದಿಂದ ಸಾಲಗಾರರ ಕಾಟ ತಾಳಲಾಗುತ್ತಿಲ್ಲ. ದಿನದಿಂದ ದಿನಕ್ಕೆ ರೈತರು ಆತಂಕಕ್ಕೀಡಾಗಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಅಥವ ಸರ್ಕಾರದಿಂದ ಕತ್ತೆ ಹಾಲನ್ನು ಮಾರಾಟಟ ಮಾಡಲು ಒಂದು ಮಾರುಕಟ್ಟೆ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net