ನಾಯಿಗಳ ಹಾವಳಿ ತಡೆಗಟ್ಟಲು ಸಹಕರಿಸಿ

05 MANJU 05
Published on

ಹೊಸಪೇಟೆ: ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ಹಿನ್ನೆಲೆಯಲ್ಲಿ ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಮಾಂಸ ಮಾರಾಟಗಾರರ ಸಭೆ ನಡೆಯಿತು.

ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿ, ಇತ್ತೀಚಿಗೆ ನಗರದ ಬಹುತೇಕ ವಾರ್ಡ್ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ, ಸಾರ್ವಜನಿಕರಿಗೆ ಮುಖ್ಯವಾಗಿ ಚಿಕ್ಕ ಮಕ್ಕಳ ಮೇಲೆ ದಾಳಿ ಮಾಡಿರುವ ಘಟನೆಗಳು ನಡೆದಿವೆ. ನಗರದಲ್ಲಿ ಕೆಲ ಮಾಂಸ ಮಾರಾಟಗಾರರು ತ್ಯಾಜ್ಯವನ್ನು ರಸ್ತೆಯ ಮೇಲೆ ಚೆಲ್ಲುವುದು ನಿಲ್ಲಸಬೇಕು. ಸುತ್ತಾ ಮುತ್ತಾ ಸ್ವಚ್ಛತೆಯನ್ನ ಕಾಪಾಡಬೇಕು. ಯಾವುದೇ ಮಾಂಸದ ತ್ಯಾಜ್ಯವನ್ನು ಒಂದೆಡೆ ಶೇಖರಣೆ ಮಾಡಲು ಸೂಚಿಸಲಾಯಿತು. ಮಾಂಸವನ್ನು ಕಡ್ಡಾಯವಾಗಿ ಗಾಜಿನಿಂದ ತಯಾರಿಸಿದ ಪೆಟ್ಟಿಗೆಯಲ್ಲಿ ಇಟ್ಟು ಬೀದಿ ನಾಯಿಗಳಿಗೆ ಕಾಣದೇ ಇಟ್ಟು ಮಾರಾಟ ಮಾಡಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ನಗರಸಭೆ ಉಪಾಧ್ಯಕ್ಷರಾದ ರಮೇಶ್ ಗುಪ್ತ, ನಗರಸಭೆ ಸದಸ್ಯರಾದ ದಾದಾ ಖಲಂದರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net