ಡಿಎನ್ಕೆರೆ ಅಧ್ಯಕ್ಷೆಯಾಗಿ ಎ.ಲಕ್ಷ್ಮಿದೇವಿ

04 MANJU 07
Published on

ಮರಿಯಮ್ಮನಹಳ್ಳಿ: ಸಮೀಪದ ಡಣಾಯಕನಕೆರೆ ಗ್ರಾ.ಪಂ.ಗೆ ಅಧ್ಯಕ್ಷೆಯಾಗಿ ಎ.ಲಕ್ಷ್ಮಿದೇವಿ ಮಂಗಳವಾರ ಆಯ್ಕೆಯಾಗಿದ್ದಾರೆ ಎಂದು ಹೊಸಪೇಟೆ ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ ತಿಳಿಸಿದರು.

ಈ ಹಿಂದೆ ಅಧ್ಯಕ್ಷ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ಚುನಾವಣೆನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಸದಸ್ಯೆ ಎ.ಲಕ್ಷ್ಮಿದೇವಿ, ಪಿ.ಸೋಮಪ್ಪ, ರೂಪ ನಾಮ ಪತ್ರಸಲ್ಲಿಸಿದ್ದರು. ಎ.ಲಕ್ಷ್ಮೀದೇವಿ ಹಾಗೂ ಸೋಮಪ್ಪ ತಲ 8 ಮತಗಳು, ರೂಪ 3 ಮತ ಪಡೆದರು. ಲಕ್ಷ್ಮೀದೇವಿ ಹಾಗು ಸೋಮಪ್ಪ ಇಬ್ಬರೂ ಸಮನಾಗಿ ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಚೀಟಿಯ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎ.ಲಕ್ಷ್ಮಿದೇವಿ ಗೆಲವು ಸಾಧಿಸಿದರು ಎಂದು ಚುನಾವಣಾಧಿಕಾರಿ ತಹಸೀÃಲ್ದಾರ್ ಘೋಷಿಸಿದರು. ಗ್ರಾಪಂ ಒಟ್ಟು 19 ಸದಸ್ಯರ ಪೈಕಿ ಎಲ್ಲಾ ಸದಸ್ಯರು ಹಾಜರಿದ್ದರು.

ಪಿಡಿಒ ಜಿಲಾನ್ ಬಾಷ, ಹಗರಿಬೊಮ್ಮನಹಳ್ಳಿ ಪಿಐ ವಿಕಾಸ್ ಲಮಾಣಿ, ಪಟ್ಟಣದ ಪಿಎಸ್‌ಐಗಳಾದ ಮೌನೇಶ ರಾಥೋಡ್, ಉಪಾಧ್ಯಕ್ಷೆ ನೇತ್ರ ಸೂರ್ಯಪ್ರಕಾಶ, ಸದಸ್ಯರಾದ ಚಿನ್ನಾಪುರಿ, ಯು.ವೆಂಕಟೇಶ, ಹನುಮಂತ, ವಸಂತಕುಮಾರಿ, ಎಚ್.ನಾಗಪ್ಪ, ಆನಂದ, ರೇಣುಕಾ, ಶಶಿಕಲಾ, ಯು.ಸೋಮಪ್ಪ, ಪಕ್ಕೀರಪ್ಪ, ಜ್ಯೋತಿ, ರಮೇಶಪ್ಪ, ಸಾವಿತ್ರಮ್ಮ, ರೂಪ, ಅಕ್ಕಮಹಾದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net