

ಹೊಸಪೇಟೆ: ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ಬೆಳೆಯಿಂದ ನಾಡು ಸಮೃದ್ಧವಾಗಿದ್ದು ವೈವಿದ್ಯಮಯದಲ್ಲಿ ಏಕತೆ ಸಾರುವ ಬೆಳಕಿನ ಹಬ್ಬ ದೀಪಾವಳಿಗೆ ಜನರು ಸಜ್ಜಾಗಿದ್ದು, ಮಾರುಕಟ್ಟೆಯಲ್ಲಿ ಖರೀಧಿ ಭರಾಟೆ ಜೋರಾಗಿದೆ.
ದೀಪಾವಳಿ ಸೊಬಗು ಎಂಬAತೆ ಮನೆಯ ಮುಂಭಾಗದಲ್ಲಿ ಕಟ್ಟಲಾಗುವ ಆಕಾಶಬುಟ್ಟಿ, ತೋರಣ ಮತ್ತು ಹಣತೆ ಮತ್ತಿತರ ವಸ್ತುಗಳ ಖರೀದಿಗೆ ಗೃಹಿಣಿಯರು ಆಸಕ್ತಿ ತೋರಿದರೆ, ಹಸಿರು ಪಟಾಕಿಗಳ ಖರೀದಿಯ ಭರಾಟೆಯಲ್ಲಿ ಮಕ್ಕಳು, ಯುವಕ-ಯುವತಿಯರು ನಿರತರಾಗಿದ್ದಾರೆ.
ಖರೀದಿಗಾಗಿ ಇಲ್ಲಿನ ಗಾಂಧಿಚೌಕು, ಮೇನ್‌ಬಜಾರ್, ಮದಕರಿವೃತ್ತ, ಸಂಗೋಳ್ಳಿರಾಯಣ್ಣ ವೃತ್ತ, ನೆಹರು ಕಾಲೋನಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಇಕ್ಕೆಲಗಳ ಅಂಗಡಿಗಳಲ್ಲಿ ಜನದಟ್ಟಣೆ ಕಂಡುಬAತು. ಇಲ್ಲಿನ ಮಾರುಕಟ್ಟೆಯಲ್ಲಿನ ಬಟ್ಟೆ ಮತ್ತು ಫ್ಯಾನ್ಸಿ ಸ್ಟೋರ್, ಪೂಜಾ ಸಾಮಾಗ್ರಿ ಮಾರಾಟದ ಅಂಗಡಿಗಳು ಗ್ರಾಹಕರಿಂದ ತುಂಬಿದವು. ಇನ್ನೂ ಆನ್‌ಲೈನ್ ಕಂಪೆನಿಗಳು ಜನರಿಗಾಗಿ ವಿಶೇಷ ಆಫರ್‌ಗಳನ್ನು ಬಿಟ್ಟಿದ್ದು, ತಮ್ಮ ಕುಟುಂಬಗಳಿಗೆ ಬಟ್ಟೆ ಸೇರಿ ಇನ್ನಿತರ ವಸ್ತುಗಳನ್ನು ಸಾರ್ವಜನಿಕರು ಖರೀದಿ ಮಾಡಿದ ವಸ್ತುಗಳ ಬರುತ್ತಿವೆ. ಈ ಭಾರಿ ಮಳೆ ಬೆಳೆ ಉತ್ತಮವಾಗಿದ್ದು ಜನರು ಹಬ್ಬ ಸಂಭ್ರಮ ಮಾಡಲು ಸಜ್ಜಾಗಿದ್ದಾರೆ.
ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಹೂವು ಹಾಗೂ ಹಣ್ಣಿನ ಬೆಲೆ ಕೂಡ ಗಗನಕ್ಕೆರಿದೆ. ಒಂದು ಕೆಜಿ ಕಾಕಡ ಹೂವಿನ 800 ರಿಂದ 900 ರೂ., ಮಲ್ಲಿಗೆ 620 ರಿಂದ 700 ರೂ., ಗುಲಾಬಿ ಬಟನ್ಸ್ 420 ರೂ., ಸಾವಂತಗಿ ಒಂದು ಕುಚ್ಚು 200 ರೂ., ಸುಗಂದ್‌ರಾಜ್ 400 ರೂ., ಚಂಡುಹೂವ 100 ರೂ., ಕನಕಾಂಬರ ಸಾವಿರ ರೂ., ಕಮಲದ ಹೂವು ಕಟ್ಟ್ ಒಂದಕ್ಕೆ 50 ರಿಂದ 100 ರೂಪಾಯಿ ಇದೆ. ಇನ್ನೂ ಹಣ್ಣಿನ ಬೆಲೆ ನೋಡುವುದಾದರೆ ಕೆಜಿ ಸೇಬು 150 - 220 ರೂ., ಸಪೋಟ 120 ರೂ., ಆರೆಂಜ್ 220 -80 ರೂ., ಮುಸೆಂಬಿ 120 ರೂ., ದ್ರಾಕ್ಷಿ 200 - 240 ರೂ., ಬೇಲದಣ್ಣು 100 ರೂ., ದಾಳಿಂಬೆ 250 ರೂ., ಬಾಳೆ 50 ರೂ., ಪೂಜೆಗೆ ಒಂದು ಸೆಟ್ 320 ರೂಪಾಯಿ ಇದೆ. ಇತರೆ ದಿನಗಳಿಗಿಂತ ದುಪಟ್ಟು ದುಬಾರಿಯಾಗಿದೆ.
ಹಬ್ಬಕ್ಕಾಗಿ ಬಾಳೆ ದಿಂಡು ಹಾಗೂ ಕಬ್ಬು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ. ಲಕ್ಷಿö್ಮ ಪೂಜೆ ಸೇರಿ ಅಂಗಡಿ ಮುಂಗಟ್ಟುಗಳಲ್ಲಿ ಪೂಜೆಗಾಗಿ ಬಾಳೆ ದಿಂಡು ಖರೀದಿ ಮಾಡುತ್ತಿದ್ದಾರೆ. ಒಂದು ಜತೆ 50 ರಿಂದ 100 ರೂ. ವರೆಗೆ ಮಾರಾಟವಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.
ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಬಗೆ ಬಗೆಯ ಆಕಾಶಬುಟ್ಟಿಗಳು, ನಾನಾ ಅಲಂಕಾರಿಕ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಗಾತ್ರಕ್ಕೆ ಅನುಗುಣವಾಗಿ ಆಕಾಶಬುಟ್ಟಿಗಳು ಮಾರಾಟವಾಗುತ್ತಿದ್ದು 100 ರಿಂದ 1000 ರೂ.ವರೆಗೆ ಮಾರಾಟವಾಗುತ್ತಿವೆ. ನಾನಾ ಆಕಾರದ ಆಕಾಶಬುಟ್ಟಿಗಳು ಖರೀದಿದಾರರನ್ನು ಆಕರ್ಷಿಸುತ್ತಿವೆ. ಕೆಲವೆಡೆ ಬಿದಿರಿನಿಂದ ತಯಾರಿಸಿದ ಪರಿಸರ ಸ್ನೇಹಿ ಆಕಾಶಬುಟ್ಟಿಗಳು ಮಾರುಕಟ್ಟೆಯಲ್ಲಿ ಜನರನ್ನು ಸೆಳೆಯುತ್ತಿವೆ.
ದೀಪಾವಳಿ ಹೆಸರು ಕೇಳಿದಾಕ್ಷಣ ಮನಸ್ಸು ಉಲ್ಲಾಸಿತವಾಗುತ್ತದೆ. ಮನೆ, ಮನಗಳಲ್ಲಿ ಸಂಭ್ರಮದ ದೀಪ ಪ್ರಜ್ವಲಿಸುತ್ತದೆ. ಅಂಥ ಮಹತ್ವದ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ದೀಪಗಳ ಖರೀದಿಯ ಭರಾಟೆ ಆರಂಭವಾಗಿದೆ. ಮಣ್ಣಿ ಹಣತೆ ಜತೆಗೆ ಆಧುನಿಕತೆಯ ನಾಗಾಲೋಟದಲ್ಲಿ ಪ್ಲಾಸ್ಟಿಕ್, ಪಿಂಗಾಣಿಯಿAದ ತಯಾರಿಸಿದ ನಾನಾ ಬಗೆಯ ಬಣ್ಣಬಣ್ಣದ ದೀಪಗಳು ಮಾರುಕಟ್ಟೆಗೆ ಬಂದಿವೆ. ನಗರೀಕರಣ ಬದಲಾದ ಸಂಸ್ಕೃತಿಯಿAದಾಗಿ ದೇಶಿಯ ವಸ್ತುಗಳು ತೆರೆಮರೆಗೆ ಸರಿಯುತ್ತಿವೆ.
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದೀಪಾವಳಿ ಆಚರಣೆಗೆ ಜಿಲ್ಲಾಡಳಿತ ಸಜ್ಜಾಗಿದೆ. ಪಟಾಕಿಗಳು ನಗರ, ಪಟ್ಟಣಗಳಿಂದ ಹೊರಗೆ ಮಳಿಗೆಗಳನ್ನು ಮಾಡಲಾಗಿದೆ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ. ನಿಮಯ ಉಲ್ಲಂಘಿಸಿದರೆ ಕ್ರಮ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ