ಹೊಸಪೇಟೆಯಲ್ಲಿ ಉತ್ತಮ ಮಳೆ

14 MANJU 03
Published on

ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಗುರುವಾರ ಮಧ್ಯಾಹ್ನ ಉತ್ತಮ ಮಳೆಯಾಗಿ ವಾತಾವರಣ ತಂಪಾಗಿಸಿದೆ.

ಬಳಗ್ಗೆಯಿAದ ಮಧ್ಯಾಹ್ನದ ರೆಗೆ ಬೇಸಿಗೆಯ ಬಿಸಲಿನಂತೆ ಸೂರ್ಯನ ತಾಪ ಹೆಚ್ಚಿತ್ತು. ಮಧ್ಯಾಹ್ನ ಏಕಾಏಕಿ ಗುಡುಗು ಸಹಿತ ಸುರಿದ ಮಳೆಯು ತಂಪದ ವಾತಾವರಣ ಮೂಡಿಸಿತು. ಹೊಸಪೇಟೆ ನಗರದ ಹಲವು ಬಡಾವಣೆಗಳಲ್ಲಿ ಸೇರಿದಂತೆ ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಭರ್ಜರಿ ಮಳೆ ಸುರಿದಿದೆ. ಮಳೆಯಿಂದ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಕಂಡುಬAತು.

ನಗರದಲ್ಲಿ ವ್ಯವಸ್ಥಿತ ಚರಂಡಿ, ಪಾರ್ಕಿಂಗ್ ನಿರ್ಮಾಣ ಮಾಡದೇ ರಸ್ತೆಗಳಲ್ಲೇ ನೀರು ನಿಲ್ಲುವಂತಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ನಗರಸಭೆ ಅಸಮರ್ಪಕ ಯೋಜನೆ ರೂಪಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವಂತಾಗಿದೆ. ನಗರದ ಕಾಲೇಜು ರಸ್ತೆ, ಮೇನ್ ಬಜಾರ್, ಹಂಪಿ ರಸ್ತೆ, ಡ್ಯಾಂ ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ನೀರು ನಿಂತಿದ್ದರಿAದ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು. ಬರೋಬ್ಬರಿ ಒಂದು ತಾಸು ಭರ್ಜರಿ ಮಳೆ ಸುರಿದಿದ್ದರಿಂದ ನಗರದ ಇಡೀ ಚಿತ್ರಣವೇ ಬದಲಾಗಿತ್ತು. ನಳನಳಿಸುತ್ತಿದ್ದ ಡಾಂಬಾರು ರಸ್ತೆಗಳಲ್ಲೂ ನೀರು ನಿಂತು, ಹೊಂಡವಾಗಿ ಮಾರ್ಪಟ್ಟಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net