ಬೇಸಿಗೆಯಲ್ಲಿ ವಿಜಯನಗರ ನಿರಾಳ

18 MANJU 01
Published on

ಹೊಸಪೇಟೆ: ಬಿಸಿಲ ನಾಡು ಬೇಸಿಗೆ ಆರಂಭವಾಗುತ್ತಿದ್ದAತೆ ಕುಡಿವ ನೀರು ಸೇರಿದಂತೆ ಇತರೆ ಸಮಸ್ಯೆಗಳನ್ನು ಎದುರಿಸುತ್ತದ್ದ ವಿಜಯನಗರ ಜಿಲ್ಲಾಡಳಿತ ಈ ಬಾರಿ ಸಮಸ್ಯೆ ದೂರವಾಗಿದೆ. ತುಂಗಭದ್ರಾ ಜಲಾಶಯ, ಕೆರೆಗಳಲ್ಲಿ ನೀರಿನ ಸಂಗ್ರಹ ಸೇರಿದಂತೆ ಕೊಳವೆಬಾವಿಗಳಲ್ಲಿ ಅಂತರ್ಜಲ ಉತ್ತಮವಾಗಿದ್ದು, ತಕ್ಕಮಟ್ಟಿಗೆ ಬೇಸಿಗೆ ನಿರ್ವಹಣೆ ಸುಲಭವಾಗಲಿದೆ.

ಕಲ್ಯಾಣ ಕರ್ನಾಟಕ ಎಂದರೆ ಸಾಕು ಬೀಸಲು ನಾಡು ಎಂಬ ಖ್ಯಾತಿ ಪಡೆದಿದೆ. ಈ ಭಾಗದಲ್ಲಿ ಬೇಸಿಗೆ ಆರಂಭವಾಗುತ್ತಿದದAತೆ ಕುಡಿವ ನೀರಿಗೂ ಪರದಾಟ ಶುರುವಾಗುತ್ತದೆ. ಅದರಂತೆ ವಿಜಯನಗರ ಜಿಲ್ಲೆಯಲ್ಲಿ ಬೇಸಿಗೆಯ ನಿರ್ವಹಣೆ ಸವಾಲಾಗುತ್ತಿತ್ತು. ಕಳೆದ 2024ರ ಮೇ ತಿಂಗಳಿAದ ಡಿಸೆಂಬರ್ ವರೆಗೆ 643 ಮಿಮೀ ಮಳೆಗೆ 764 ಮಿಮೀ ಮಳೆಯಾಗಿದೆ. ಶೇ.19 ರಷ್ಟು ವಾಡಿಕೆಗಿಂತ ಮಳೆ ಹೆಚ್ಚಾಗಿದೆ. ಬಹುತೇಕ ಕೆರೆಕಟ್ಟೆಗಳು ತುಂಬಿ ತುಳುಕಿದವು. ತುಂಗಭದ್ರಾ ಜಲಾಶಯ ಸೇರಿದಂತೆ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ 60 ಕೆರೆಗಳು ಸೇರಿದಂತೆ ಇತರೆ ಕೆರೆಗಳು ಹಾಗೂ ಚಕ್‌ಡ್ಯಾಂಗಳಲ್ಲಿ ಇನ್ನು ನೀರಿದೆ. ಇದರಿದಾಗಿ ಅಂತರ್ಜಲ ಮಟ್ಟ ಉತ್ತಮವಾಗಿದೆ. ಹಲವು ವರ್ಷಗಳಿಂದ ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ಈ ಬಾರಿ ಭರಪೂರದ ನೀರಿವೆ. ಹರಪನಹಳ್ಳಿಯ ಕೆಲ ಗ್ರಾಮಗಳನ್ನು ಹೊರತು ಪಡಿಸಿದರೆ, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಕುಡಿವ ನೀರಿಗೂ ಸಮಸ್ಯೆ ಆಗುವುದಿಲ್ಲ ಎಂದು ಅಧಿಕಾರಿಗಳು ಸಮಾಧಾನವಾಗಿದ್ದಾರೆ.

ಜಿಲ್ಲೆಯಲ್ಲಿ ಗ್ರಾಮೀಣಕ್ಕಿಂತ ಹೊಸಪೇಟೆ ನಗರ, ಕಮಲಾಪುರ, ಮರಿಯಮ್ಮನಹಳ್ಳಿ ಸೇರಿದಂತೆ ಇತರೆ ಪಟ್ಟಣಗಳಲ್ಲಿ ನಿರಂತರವಾಗಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಗರದಲ್ಲಿ 24*7 ಕುಡಿವ ನೀರಿನ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಇದರಿಂದ ನೀರಿನ ಪೂರೈಕೆ ಸಮರ್ಪಕವಾಗಿರದ ಕಾರಣ ಬೇಸಿಗೆಯಲ್ಲಿ ಇದು ಸ್ವಲ್ಪ ಹೆಚ್ಚಾಗುವಾ ಸಾಧ್ಯತೆಯಿದೆ. ಜನರು ಖಾಲಿ ಕೊಡಗಳೊಂದಿಗೆ ಬೀದಿಗಿಳಿಯುವಂತಾಗುತ್ತದೆ.

40 ಟಿಎಂಸಿ ನೀರು

ಉತ್ತಮ ಮಳೆಯಿಂದ ಅವದಿ ಮುನ್ನ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಕಳೆದ ಆ.10ರಂದು ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ರೈತರಿಗೆ ಆತಂಕ ಮೂಡಿಸಿತು. ಒಂದು ವಾರದ ನಂತರ 30 ಟಿಎಂಸಿಗೂ ಅಧಿಕ ನೀರು ಪೋಲಾಯಿತು. 70 ಟಿಎಂಸಿ ನೀರಿನಲ್ಲಿ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಮಾಡಲಾಯಿತು. ನಂತರ ಕೆಲ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯ ಮತ್ತೆ ಭರ್ತಿಯಾಯಿತು. ಸಧ್ಯ 105.788 ಟಿಎಂಸಿ ನೀರಿನ ಸಾಮಾರ್ಥ್ಯದ ಜಲಾಶಯದಲ್ಲಿ 40.512 ಟಿಎಂಸಿ ನೀರರಿದೆ.

ಜಿಲ್ಲಾಡಳಿತ ಸಿದ್ಧತೆ

ಬೇಸಿಗೆ ನಿರ್ವಹಣೆ ಸಂಬAಧ ಜಿಲ್ಲಾಮಟ್ಟದ ಅಧಿ ಕಾರಿಗಳಸಭೆ ನಡೆದಿದೆ. ಸದ್ಯದ ಅಂದಾಜಿನAತೆ ಬೇಸಿಗೆ ಪೂರ್ತಿ ಕುಡಿವ ನೀರು ಹಾಗೂ ಮೇವಿನ ಲಭ್ಯತೆ ಇದ್ದರೂ, ಬೇಸಿಗೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನಿಭಾಯಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ಮೇವಿಗಿಲ್ಲ ಬರ

ಉತ್ತಮ ಮಳೆಯಿಂದ ಭರಪೂರದ ಆಹಾರ ಉತ್ಪನ್ನಗಳನ್ನು ರೈತರು ಬೆಳೆದಿದ್ದಾರೆ. ಮೇವು ಹೆಚ್ಚಿನ ಪ್ರಮಾಣದಲ್ಲಿ ಕೂಡ ಹೆಚ್ಚಾಗಿದೆ. ಈ ಪೈಕಿ ಜೋಳ, ಗೋವಿನ ಜೋಳ, ಶೇಂಗಾ ಹೊಟ್ಟು ಯಥೇತೃವಾಗಿ ಬೆಳೆದಿದೆ. ರೈತರು ಅನ್ಯ ಜಿಲ್ಲೆಯವರಿಗೆ ಮೇವು ಮಾರಾಟ ಮಾಡದಿದ್ದರೆ. ಈ ಬೇಸಿಗೆ ಪೂರ್ಣಗೊಂಡು, ಮಳೆಗಾಲ ಆರಂಭದ ವರೆಗೆ ಮೇವು ಸಿಗುತ್ತದೆ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು.

ಅಂತರ್ಜಲ ಉತ್ತಮ

ಕಳೆದ ಮುಂಗಾರಿನಲ್ಲಿ ಶೇ.7.22 ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಇನ್ನೂ ಹಿಂಗಾರಿನಲ್ಲಿ ಶೇ.47.80 ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿದೆ. 3 ರಿಂದ 13 ಮೀಟರ್ಗೆಗೆ ಬಂದಿತ್ತು. ಕಳೆದ ವರ್ಷ ಬರಗಾಲ ಆವರಿಸಿತು. ಇದರಿಂದ ಅಂತರ್ಜಲ ಕುಸಿದಿತ್ತು. ಕಳೆದ ಮುಂಗಾರಿನಲ್ಲಿ ಸತತ ಮಳೆಯಿಂದ ಜಿಲ್ಲೆಯ ಯಾವುದೇ ಭಾಗದಲ್ಲಿ ಕೊರೆದರೂ 6.15 ಮೀಟರ್‌ಗೆ ನೀರು ದೊರೆಯುತ್ತದೆ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗದ ಅಧಿಕಾರಿಗಳು.

ದೂರವಾದ ನರಕಯಾತನೆ

ಕಳೆದ ವರ್ಷ 2023-24ರಲ್ಲಿ ಬರಗಾಲ ಎದುರಾಗಿತ್ತು. ಜಿಲ್ಲೆಯಲ್ಲಿ 333 ಗ್ರಾಮಗಳು ಹಾಗೂ ನಗರ ಹಾಗೂ ಪಟ್ಟಣ 46 ವಾರ್ಡ್ಗಳಲ್ಲಿ ನೀರಿನ ಕೊರತೆ ಉದ್ಭವಿಸಿತು. ಖಾಸಗಿ ಬೋರ್ವೆಲ್ ಮುಖಾಂತರ ಜಿಲ್ಲೆಯ 67 ಗ್ರಾಮಗಳಲ್ಲಿ 73 ಖಾಸಗಿ ಕೊಳವೆಬಾವಿಗಳ ಮುಖಾಂತರ ಕುಡಿವ ನೀರನ್ನು ಸರಬರಾಜು ಮಾಡಲಾಯಿತು. ಸಾರ್ವಜನಿಕರಿಗೆ ಕುಡಿವ ನೀರಿನ ಸಮರ್ಪಕ ಪೂರೈಕೆಗೆ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಬರಗಾಲ ಎದುರಿಸುವ ಸಂಬAಧ ಸಹಾಯವಾಣಿ ಆರಂಭಿಸಲಾಗಿತ್ತು. ಕುಡಿವ ನೀರಿಗೂ ಪರಿದಾಡಿದ ಜನರಿಗೆ ಕಳೆದ ವರ್ಷದ ನರಕಯಾತೆ ದೂರವಾಗಿದೆ.

ಕಳೆದ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದೆ. ಎಲ್ಲ ಕೊಳವೆಬಾವಿಗಳಲ್ಲಿ ನೀರು ಇದೆ. ಮೇವಿನ ಕೊರತೆಯಿಲ್ಲ. ಹರಪನಹಳ್ಳಿ ಕೆಲ ಗ್ರಾಮಗಳನ್ನು ಹೊರತು ಪಡಿಸಿದರೆ ಉಳಿದೆಲ್ಲ ತಾಲೂಕುಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗಿಲ್ಲ. ಜಲಾಶಯದಲ್ಲಿ ಇನ್ನೂ 40 ಟಿಎಂಸಿ ನೀರಿದೆ. ಯಾವುದೇ ಸಮಸ್ಯೆ ಆಗಲ್ಲ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net