

ಹೊಸಪೇಟೆ: ಅಂಗನವಾಡಿ ಕಟ್ಟಡಗಳು ಬಹುತೇಕ ಬಾಡಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಬಂಧಫಟ್ಟಂತೆ ಅಧಿಕಾರಿಗಳ ಜತೆ ಪತ್ರ ವ್ಯವಹಾರ ನಡೆದಿದೆಯ? ಮಕ್ಕಳ ತಾಯಂದಿರ ಸಂಖ್ಯೆ ಇದೆಯೇ? ಸಭೆಯಲ್ಲಿ ಸಮಗ್ರ ಮಾಹಿತಿ ಒದಗಿಸದೇ ಇದ್ದರೆ ಇಲಾಖೆಯಲ್ಲಿನ ಮಾಹಿತಿ ಹೇಗೆ ಹೋತ್ತಾಗೋದು? ಎಂದು ಸಂಸದ ಈ.ತುಕಾರಾಮ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಶ್ವೇತಾಗೆ ತರಾಟೆಗೆ ತಗೆದುಕೊಂಡರು.
ನಗರದ ಜಿಲ್ಲಾಧಿಕಾರಿ ಭವನದಲ್ಲಿ ಮಂಗಳವಾರ ನಡೆದ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ (ದಿಶಾ)ಯಲ್ಲಿ ಅಂಕಿ-ಅಂಶ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಡಿಡಿ ಶ್ವೇತಾ ಉತ್ತರಿಸಲಾಗದೆ ತಡಬಡಿಸಿದರು.
ಜಿಲ್ಲೆಯಲ್ಲಿ 1,590 ಅಂಗನವಾಡಿಗಳಿದ್ದಾವೆ. 206 ಅಂಗನವಾಡಿಗಳು ಸದ್ಯ ಬಾಡಿಗೆ ಕಟ್ಟಡಗಳಲ್ಲಿಯೆ ಕಾರ್ಯನಿರ್ವಹಿಸುತ್ತಿವೆ. ಇಲಾಖೆಯ ಎಲ್ಲ ಮಾಹಿತಿಯನ್ನು ಸಮಗ್ರ ಮಾಹಿತಿಯೊಂದಿಗೆ ಬನ್ನಿ. ಅರ್ಧಂ ಬರ್ಧ ಮಾಹಿತಿಯನ್ನು ಸಭೆಗೆ ಒದಗಿಸಿದರ ಹೇಗೆ? ಬಾಲ್ಯ ವಿವಾಹ, ಭ್ರೂಣ ಹತ್ಯೆ, ಫೋಕ್ಸೊ ಪ್ರಕರಣಗಳ ಚರ್ಚೆ ಬಂದಾಗ ಯಾರು ಸಹ ವಿಜಯನಗರ ಜಿಲ್ಲೆಯತ್ತ ಬೊಟ್ಟು ಮಾಡಬಾರದು. ಜಿಲ್ಲೆಯ ಹೆಸರು ಕೆಡಬಾರದು. ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತು ಎಸ್ಪಿಯವರು ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಪೋಕ್ಸೊ ಕಾಯಿದೆಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಯುದ್ಧೋಪಾದಿಯಲ್ಲಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲು ತುರ್ತು ಕ್ರಮ ವಹಿಸಬೇಕು ಎಂದ ಸೂಚಿಸಿದರು.
ಜಿಲ್ಲಾಧಿಕಾರಿ ದಿವಾಕರ್ ಮಾತನಾಡಿ, ಮೊದಲು ಕೆಲಸ ಮಾಡೋದನ್ನು ಕಲಿತುಕೊಳ್ಳಿ. ನೀವು ಕ್ರಿಯಾಯೋಜನೆ ರೂಪಿಸಿ ಕೊಡಿ, ಜಿಪಂ ಸಿಇಒ ಅಕ್ರಮ ಶಾ ಅವರು ಅನುಮೋದನೆ ನೀಡುತ್ತಾರೆ ಎಂದು ಖಾರವಾಗಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮೀಣ ಭಾಗಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ತೆರಳಬೇಕು. ಹಳ್ಳಿಗಳಿಗೆ ಭೇಟಿ ನೀಡಿದಾಗಲೇ ಕೆಲಸ ಮಾಡಲು ಸಾಧ್ಯ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಮಗೆಲ್ಲರಿಗೂ ಕೆಲಸ ಮಾಡಲು ಇದೊಂದು ಅವಕಾಶ ಸಿಕ್ಕಿದೆ. ಹಾಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ಟೀಮ್ ಆಗಿ ಕೆಲಸ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಕೃಷಿ ತಜ್ಞರ ತಂಡದಿAದ ಸಮೀಕ್ಷೆ ನಡೆಸಿ ಮಾಸ್ಟರ್ ಪ್ಲಾನ್ ರೂಪಿಸಬೇಕು. ತಜ್ಞರ ಮಾರ್ಗದರ್ಶನದಂತೆ ಜಿಲ್ಲೆಯ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲು ವಿಶೇಷ ಕ್ರಮ ವಹಿಸಬೇಕು ಎಂದು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಸರ್ಕಾರಿ ಇಲಾಖೆಗಳಲ್ಲಿ ಪ್ರೊಟೋಕಾಲ್ ಮೆಂಟೇನ್ ಮಾಡದೇ ಇದ್ದರೆ ಹೇಗೆ? ಒಬ್ಬ ಸಂಸದನಿಗೆ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಯ ಆಹ್ವಾನ ಪತ್ರಿಕೆ ಇಲ್ಲಾ ಅಂದರೆ ಹೇಗೆ ಹೇಳಿ? ನೀವು ಸಂಸದರಿಗೆ ಮಾಡಿದ ಅಪಮಾನ ಅಲ್ವಾ? ಪ್ರೋಸಿಜರ್ ಫಾಲೋ ಮಾಡದ ನೀವು ಹೇಗೆ ಕೆಲಸ ಮಾಡುತ್ತಿರಿ? ನೀವು ತುಕಾರಾಂಗೆ ಗೌರವ ಕೊಡಿ ಅಂತ ನಾನು ಹೇಳ್ತಿಲ್ಲಾ. ಜನ ಆಯ್ಕೆ ಮಾಡಿದ ಸಂಸದನಿಗೆ ಅಗೌರವ ಮಾಡಿದರೆ ಹೇಗೆ? ನೀವು ಸಂವಿಧಾನಕ್ಕೆ ಮಾಡಿದ ಅಪಮಾನ ಇದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಗೆ ತರಾಟೆಗೆ ತಗೆದುಕೊಂಡರು.
ಜಿಲ್ಲೆಯ ಗ್ರಾಮೀಣ ಭಾಗದ 586 ಸ್ಮಶಾನಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಬೇಕು. ಸ್ಮಶಾನಗಳಿಗೆ ತೆರಳಲು ರಸ್ತೆಗಳೇ ಇಲ್ಲ. ಹೀಗಿದ್ದರೂ ಕ್ರಮವಹಿಸಲಾಗುತ್ತಿಲ್ಲ. ಕಳೆದ ನವೆಂಬರ್‌ನಲ್ಲಿ ನಡೆದ ದಿಶಾ ಸಭೆಯಲ್ಲೇ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು 586 ಸ್ಮಶಾನಗಳನ್ನು ಅಭಿವೃದ್ಧಿಪಡಿಸಲು ಸೂಚಿಸಿದ್ದಾರೆ. ಆದರೆ, ಈಗ ಬರೀ 60 ಸ್ಮಶಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಜಿಪಂ ಅಧಿಕಾರಿ ಭೀಮಪ್ಪಗೆ ಸಂಸದ ಈ.ತುಕಾರಾಮ್ ತರಾಟೆಗೆ ತೆಗೆದುಕೊಂಡರು.