ಮೋಟಾರ್ ಚಾಲಿತ ವಾಹನಕ್ಕಾಗಿ ಮನವಿ

Published on

ಹೊಸಪೇಟೆ: ಮೋಟಾರ್ ಚಾಲಿತ ವಾಹನ ನೀಡಬೇಕು ಎಂದು ಒತ್ತಾಯಿಸಿ ನಗರ ಘಟಕ ವಿಕಲಚೇತನರ ಸಂಘಟನೆಯಿAದ ಇಲ್ಲಿನ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ಗೆ ಮನವಿ ಸಲ್ಲಿಸಲಾಯಿತು.

ನಗರಸಭೆಯ ಶೇ.5ರಷ್ಟು ವಿಕಲಚೇತನರ ಅನುದಾನದಲ್ಲಿ ಮೋಟಾರ್ ಚಾಲಿತ ವಾಹನಗಳನ್ನ ವಿತರಣೆ ಮಾಡಲಿದ್ದು ಸರ್ಕಾರದ ನಿಮಯಗಳು ಮತ್ತು ವಿಕಲಚೇತನರ ಇಲಾಖೆಯ ನಿಯಮವಳಿಗನ್ನ ಅನುಸರಿಸಿ ಇಲ್ಲಿವರೆಗೂ ಯಾರಿಗೆ ಮೋಟಾರ್ ಚಾಲಿತ ವಾಹನಗಳು ಪಡೆಯದ ಫಲಾನುಭವಿಗಳಿಗೆ ಪರಿಗಣಿಸಿ ಮೊದಲ ಆಧ್ಯತೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಸಂಘಟನೆಯ ಅಧ್ಯಕ್ಷ ಲೋಹಿತ್ ತಳವಾರ್, ಉಪಾಧ್ಯಕ್ಷ ಮೆಹಬೂಬ್ ಬಾಷ, ಕಾರ್ಯದರ್ಶಿ ಪಾಂಡುನಾಯ್ಕ, ಎನ್.ಹುಲಿಗೆಮ್ಮ, ಸದಸ್ಯರಾದ ರಾಜಸಾಬ್, ಹುಲುಗಪ್ಪ, ತಾಯಣ್ಣ, ಹಜರತ್ ಅಲಿ, ದಾದು, ಮಾಬಾಷ, ತಾಯಮ್ಮ, ಗಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net