ಸಂಪೂರ್ಣ ಡಿಜಿಟಲ್ ಸಾಕ್ಷರತೆ ತರಬೇತಿ

08 MANJU 03
Published on

ಹೊಸಪೇಟೆ: ಶಿಕ್ಷಣ ಫೌಂಡೇಶನ್, ಡೆಲ್ ಕಂಪನಿ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ತಾಲೂಕಿನ ಮಲಪನಗುಡಿಯಲ್ಲಿ ಗುರುವಾರ ಸಂಪೂರ್ಣ ಡಿಜಿಟಲ್ ಸಾಕ್ಷರತೆಯ ತರಬೇತಿ ಕಾರ್ಯಕ್ರಮ ನಡೆಯಿತು.

ಅರಿವು ಕೇಂದ್ರದ ಮೇಲ್ವಿಚಾರಕಿ ಉಮಾದೇವಿ ತರಬೇತಿ ನೀಡಿ ಮಾತನಾಡಿ, ಡಿಜಿಟಲ್ ಸಾಕ್ಷರತೆ ತರಬೇತಿಯಲ್ಲಿ ಮಹಿಳೆಯರಿಗೆ ಸ್ಮಾರ್ಟ್ ಫೋನ್ ಬಳಕೆಯ ಭಾಗವಾದ ನಂಬರ್ ಸೇವ್ ಮಾಡುವುದು. ಸಂದೇಶ ರವಾನಿಸುವುದು, ಪೋನ್ ಕರೆ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಸೇರಿದಂತೆ ಅಗತ್ಯ ಮಾಹಿತಿ ನೀಡುವುದು. ಆನ್ಲೈನ್ ಬ್ಯಾಂಕಿAಗ್ ಸೌಲಭ್ಯಗಳ ಅರಿವು ಮೂಡಿಸಲಾಗುತ್ತದೆ. ಗ್ರಾಮ ಮಹಿಳೆಯರು ಮತ್ತೋಬ್ಬರ ಮೇಲೆ ಅವಲಂಬಿಯಾಗದAತೆ ಹಾಗೂ ತಮ್ಮ ಮಕ್ಕಳ ಹಿತಾಸಕ್ತಿಗಾಗಿ ಕಾಪಾಡಲು ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ ಸಹಾಯವಾಗುತ್ತದೆ ಎಂದರು.

ಈರಮ್ಮ, ಮಂಗಳಮ್ಮ, ಲಕ್ಷö್ಮಮ್ಮ, ಫಕಿರಮ್ಮ, ನಾಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net