ಜಾತಿ ಕಾಲಂನಲ್ಲಿ ‘ಗಾಣಿಗ’ ಎಂಬುದಾಗಿ ನಮೂದಿಸಿ

Untitled design (25)
ಹೊಸಪೇಟೆ ರೋಟರಿ ಕ್ಲಬ್‌ನಲ್ಲಿ ಶುಕ್ರವಾರ ಅಖಿಲ ಭಾರತ ಗಾಣಿಗರ ಸಂಘದಿಂದ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶವನ್ನು ರಾಜ್ಯ ಗೌರವಾಧ್ಯಕ್ಷ ಡಾ.ಶೇಖರ ಸಜ್ಜನ್ ಉದ್ಘಾಟಿಸಿದರು. ಅಖಿಲ ಭಾರತ ಗಾಣಿಗರ ಸಂಘಟನೆ ರಾಜ್ಯ ಉಪಾಧ್ಯಕ್ಷ ಸಂಗನಗೌಡ ಪಾಟೀಲ್, ಕಾರ್ಯದರ್ಶಿಗಳಾದ ಶರಣಪ್ಪ ನಾಗೋಜಿ, ವೀರಣ್ಣ ಗಾಣಿಗೇರ ಇತರರಿದ್ದರು.
Published on

ಹೊಸಪೇಟೆ: ರಾಜ್ಯ ಸರ್ಕಾರದ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ಜನಗಣತಿ ಸಮೀಕ್ಷೆಯಲ್ಲಿ ಸಮಾಜದವರು ಧರ್ಮ ಕಲಂನಲ್ಲಿ ‘ಹಿಂದು’, ಜಾತಿ ಕಾಲಂನಲ್ಲಿ ‘ಗಾಣಿಗ’ ಎಂದು ನಮೂದಿಸಬೇಕು ಎಂದು ಅಖಿಲ ಭಾರತ ಗಾಣಿಗರ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ.ಶೇಖರ ಸಜ್ಜನ್ ಕರೆ ನೀಡಿದರು.

ನಗರದ ರೋಟರಿ ಕ್ಲಬ್‌ನಲ್ಲಿ ಅಖಿಲ ಭಾರತ ಗಾಣಿಗರ ಸಂಘದಿಂದ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕುರಿತು ವಿಜಯನಗರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಗಾಣಿಗರ ಸಂಘದ ಪದಾಧಿಕಾರಿಗಳ ಜಾಗೃತಿ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದರು.

ಸೆ.22ರಿಂದ ಜನಗಣತಿ ಸಮೀಕ್ಷೆ ನಡೆಯಲಿದೆ. ರಾಜ್ಯಮಟ್ಟದಲ್ಲಿ ಬೆಂಗಳೂರಿನಲ್ಲಿ ಅಖಿಲ ಭಾರತ ಗಾಣಿಗರ ಸಂಘ ಕರ್ನಾಟಕ ರಾಜ್ಯ ಸಮಿತಿ ತೀರ್ಮಾನದಂತೆ ಪ್ರತಿ ಮೂರು ಜಿಲ್ಲೆಗಳಿಗೆ ಒಂದರಂತೆ ಸಭೆ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಸಮಾಜದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಪ್ರತಿ ಹಳ್ಳಿಗಳ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ಕುರಿತು ಮಾಹಿತಿ ನೀಡಬೇಕು. ಸಮೀಕ್ಷೆಯ ಜಾತಿ ಕೋಡ್ ಸಂಖ್ಯೆ 346 ಇದೆ ಎಂದರು.

ಅಖಿಲ ಭಾರತ ಗಾಣಿಗರ ಸಂಘಟನೆ ರಾಜ್ಯ ಉಪಾಧ್ಯಕ್ಷ ಸಂಗನಗೌಡ ಪಾಟೀಲ್, ಕಾರ್ಯದರ್ಶಿಗಳಾದ ಶರಣಪ್ಪ ನಾಗೋಜಿ, ವೀರಣ್ಣ ಗಾಣಿಗೇರ, ವಿಜಯನಗರ ಜಿಲ್ಲಾ ಅಧ್ಯಕ್ಷ ಜಿ.ಉಮೇಶ್, ಬಳ್ಳಾರಿ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷಪ್ಪ, ಕೊಪ್ಪಳ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು, ಪ್ರಮುಖರಾದ ರುದ್ರಮುನಿ ಗಾಳಿ, ವೀರೇಶಪ್ಪ ಸಂಡೂರು, ಎ.ಚಿದಾನಂದಗೌಡ ಸಿರಗುಪ್ಪ, ಅಂಗಡಿ ತಿಪ್ಪೇಶ, ಶಂಕರಗೌಡ ಪಾಟೀಲ್, ಶರಣಪ್ಪ ವಣೀಗೇರಿ, ಶಿವಪುತ್ರಪ್ಪ ಕುದ್ರಿಕೊಟಗಿ, ಶ್ರೀದೇವಿ ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net