

ಹೊಸಪೇಟೆ: ಅವಳು ದೇವದಾಸಿ ಮಗಳು, ಓದಿದ್ದು ಕನ್ನಡ ಮಾಧ್ಯಮ ಈಗ ಅಂತರರಾಷ್ಟ್ರೀಯ ಇಂಗ್ಲಿಷ್ ಭಾಷಾ ಪರೀಕ್ಷೆಯಲ್ಲಿ (ಐಇಎಲ್‌ಟಿಎಸ್) ಪಾಸಾಗಿ ಇಂಗ್ಲೆAಡ್‌ನ ಸಸೆಕ್ಸ್ ವಿವಿಯಲ್ಲಿ ಪಿಎಚ್.ಡಿ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ.
ಹೌದು, ತಾಲೂಕಿನ ನಾಗೇನಹಳ್ಳಿಯಲ್ಲಿ ದೇವದಾಸಿ ಕುಟುಂಬದಲ್ಲಿ ಜನಿಸಿದ್ದ ಕಾಮಾಕ್ಷಿ ಈ ಸಾಧನೆ ಮಾಡಿಇತರರಿಗೆ ಮಾಧರಿಯಾಗಿದ್ದಾರೆ. ದೇವದಾಸಿ ಕುಟುಂಬದಿAದ ಮೊದಲ ಯುವತಿಯಾಗಿದ್ದಾಳೆ. ಕಾಮಾಕ್ಷಿ ಅವರು ಈವರೆಗೆ ಸವೆಸಿದ ಹಾದಿ ಕಠಿಣವಾದದ್ದು. ಬಡತನಕ್ಕಿಂತ ಅಪ್ಪ ಯಾರು ಎಂಬ ಮಾತುಗಳು ಅವರನ್ನು ಹೆಚ್ಚು ಬಾಧಿಸಿತು. ಶಾಲೆ, ಕಾಲೇಜುಗಳಲ್ಲಿ ಮುಜುಗರ ಅನಭವಿಸಿದರು. ತಮ್ಮಂತೆಯೇ ಇರುವ ಇತರರಿಗೆ ಮಾಧರಿಯಾಗುವಂತೆ ಶಿಕ್ಷಣದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಇವರು ಕನ್ನಡ ಮಾಧ್ಯಮದಲ್ಲೇ ಪದವಿ ಪೂರ್ಣ ಮಾಡಿದ್ದಾರೆ. ಈಗ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಪ್ರಬುದ್ಧ ಯೋಜನೆಯಡಿ ವಿದೇಶದಲ್ಲಿ ಉನ್ನತ ಸಂಶೋಧನೆ ಮಾಡಲು ಆಯ್ಕೆಯಾಗಿದ್ದಾರೆ. ನಾಲ್ಕು ವರ್ಷಗಳ ಅವರ ಅಧ್ಯಯನದ ಸಂಪೂರ್ಣ ವೆಚ್ಚವನ್ನು ಇಲಾಖೆ ಭರಿಸುತ್ತದೆ. ಆದರೆ, ವೀಸಾ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದ ಹಣ ಜೋಡಿಸುವ ಪ್ರಯತ್ನದಲ್ಲಿದ್ದಾರೆ.
ದೇವದಾಸಿಯರು ಹಾಗೂ ಮಕ್ಕಳ ಸಮಾಜ ನೋಡು ದೃಷ್ಠಿಕೋನ ಬೇರೆ. ನಿಂದನೆ ಮಾತುಗಳು ಮನಸು ಗಾಸಿಯಾಗಿದೆ. ಇಂತಹ ಅಡೆ-ತಡೆಗಳನ್ನು ಲೆಕ್ಕಿಸದೇ ಸಾಧನೆ ಮಾಡಬೇಕಿದೆ. - ಕಾಮಾಕ್ಷಿ, ಇಂಗ್ಲೆAಡ್‌ನ ಸಸೆಕ್ಸ್ ವಿವಿಯಲ್ಲಿ ಪಿಎಚ್.ಡಿ ವ್ಯಾಸಂಗಕ್ಕೆ ಅಯ್ಕೆಯಾದವರು ಪ್ರಬುದ್ಧ ಯೋಜನೆಯಡಿ ವಿದೇಶದಲ್ಲಿ ಇಲಾಖೆಯಲ್ಲಿ ಯೋಜನೆ ಜಾರಿಯಲ್ಲಿದೆ. ವಿದೇಶದಲ್ಲಿ ವಿದ್ಯಾಬ್ಯಾಸ ಮಾಡುಲು ಅಲ್ಲಿನ ಶುಲ್ಕ, ಊಟ, ವಸತಿಯ ವ್ಯವಸ್ಥೆಗೆ ಬೇಕಿರುವ ಖರ್ಚು ಇಲಾಖೆ ನೋಡಿಕೊಳ್ಳುತ್ತದೆ. - ಆನಂದ್ ತಾಲಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ, ವಿಜಯನಗರ