ದೇವದಾಸಿ ಮಕ್ಕಳು ಅವಮಾನಕ್ಕೆ ಹಿಂಜರಿಯದಿರಿ

25 MANJU 02
Published on

ಹೊಸಪೇಟೆ : ಜಿಲ್ಲೆಯಲ್ಲಿ 10 ಸಾವಿರ ದೇವದಾಸಿ ತಾಯಿಂದರು ಇದ್ದಾರೆ. ಸಾಕ್ಷರತೆಯಲ್ಲಿ ತುಂಬಾ ಹಿಂದೂಳಿದಿದ್ದಾರೆ. ದೇಶದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಣ್ಣುಮಕ್ಕಳು ಗೌರವದಿಂದ ಕಾಣಬೇಕು ಎಂದು ಜಿಲ್ಲಾಧಿಕಾರಿ ಎ.ಎಸ್.ದಿವಾಕರ ಹೇಳಿದರು.

ಸಖಿ ಸಂಸ್ಥೆಯಿAದ ನಗರದ ಕ್ರೀಡಾಂಗಣ ಸಂಕಿರಣದಲ್ಲಿ ಬುಧವಾರ ದೇವದಾಸಿ ತಾಯಂದಿರ ಮತ್ತು ಮಕ್ಕಳ ಘನತೆ ಮತ್ತು ಸುಸ್ಥಿರತೆಯ ಸಮಾವೇಶ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇವದಾಸಿ ಮಕ್ಕಳು ಅವಮಾನಕ್ಕೆ ಹಿಂಜರಿಯದೆ ಮುನ್ನುಗ್ಗಿ ಶಿಕ್ಷಣ ಪಡೆದುಕೊಂಡು ತಾವು ತಮ್ಮ ಕುಟುಂಬವನ್ನು ಬದಲಾವಣೆ ಮಾಡಬೇಕು. ಇತಂಹ ಕಾರ್ಯಕ್ರಮವನ್ನು ಮಾಡುವಾಗ ದೇವದಾಸಿ ಆಗುಂತಹ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಬೇಕು. ಜತೆಗೆ ಆರೋಗ್ಯ ದೃಷ್ಟಿಯಿಂದ ಕೂಡ ಇದು ಒಳ್ಳೆಯದು ಅಲ್ಲ. ಜಿಲ್ಲಾಡಳಿತ ಸಹಾಯ ನಿಮಗೆ ಯವಾಗಲೂ ಇದ್ದೆ ಇರುತ್ತೆ. ಶಿಕ್ಷಣಕ್ಕಾಗಿ ದೇವದಾಸಿ ತಾಯಂದಿರ ಮಕ್ಕಳಿಗೆ ಮೀಸಲಾತಿ ಇದೆ. ಹಾಗೂ ವಿಶೇಷ ಸೌಲಭ್ಯಗಳಿದ್ದು ಅವುಗಳ ಸದುಪಯೋಗ ಮಾಡಿಕೊಳ್ಳಿ ಎಂದರು.

ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ದೇವದಾಸಿ ನಿರ್ಮೂಲನೆ ಕಾಯ್ದೆ 1982 ಕಾನೂನು ಯಾಕೆ ಇಷ್ಟೊಂದು ಚಾಲ್ತಿಯಲ್ಲಿ ಇಲ್ಲದೆ ಇರುವದಕ್ಕೆ ಈ ಪದ್ದತಿ ಇನ್ನು ಜೀವಂತವಾಗಿದೆ. ಕೆಲವು ಇಲಾಖೆಗಳ ನಿರ್ಲಕ್ಷ್ಯವೆ ಎದ್ದುಕಾಣುತ್ತದೆ. ದೇವದಾಸಿಯರಿಗೆ ಕಾನೂನು ನೆರವು ಬೇಕು. ಈಂತಹ ಕಾರ್ಯಕ್ರಮಗಳು ನಡೆಸಿ ದೇವದಾಸಿ ಅನಿಷ್ಠ ಪದ್ದತಿ ಎಂದು ಜಾಗೃತಿ ಮೂಡಿಸಬೇಕಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಎಲ್ಲಾ ತಾಯಂದಿರಿಗೂ ಮತ್ತು ಮಕ್ಕಳಿಗೆ ಸಿಗಬೇಕು ಎಂದರು. ಕಾರ್ಯಕ್ರಮದಲ್ಲಿ 6 ತಾಲೂಕಿನ ದೇವದಾಸಿ ತಾಯಂದಿರ ಮತ್ತು ಮಕ್ಕಳಿಗೆ ಹೊಲಿಗೆ ತರಬೇತಿ ಯಂತ್ರ ಮತ್ತು ಸರ್ಟಿಫಿಕೇಟ್ ಹಾಗೂ ಯುವಜನರಿಗೆ ಶೈಕ್ಷಣಿಕ ಧನಸಹಾಯ ಚೆಕ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net