

ಹೊಸಪೇಟೆ : ವಿವಿಧ ಬೇಡಿಕೆಗಳ ಈಡೇರುಕೆ ಆಗ್ರಹಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿAದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.
ಎಲ್ಲಾ ಬಗೆಯ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮತ್ತು ಅರಣ್ಯ ಹಕ್ಕು ಅರ್ಜಿಗಳನ್ನು ಹಾಕಿದ ರೈತರಿಗೆ ಶೀಘ್ರವೇ ಭೂ ಮಂಜೂರಾತಿ ಆದೇಶ ಹಾಗೂ ಹಕ್ಕುಪತ್ರ ನೀಡಬೇಕು. ಭೂ ಕಬಳಿಕೆ ತಡೆ ಕಾಯ್ದೆ ಹೆಸರಿನಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಪ್ರತಿ ಗ್ರಾಮವಾರು ಸರ್ವೆ ನಡೆಸಿ, ಮನೆ, ನಿವೇಶನ ಹಾಗೂ ಭೂಮಿ ಇಲ್ಲದವರಿಗೆ ನಿವೇಶನ, ಭೂಮಿ ಹಂಚಬೇಕು. ಫಾರಂ ನಂ.57 ಪುನಃ ಅರ್ಜಿ ಹಾಕಲು ಅವಕಾಶ ಒದಗಿಸಬೇಕು. ಉದ್ಯೋಗ ಖಾತರಿ 200 ದಿನಗಳ ಕೆಲಸ ನೀಡಿ, 600 ಕೂಲಿ ಹೆಚ್ಚಿಸಿ, ಉದ್ಯೋಗ ಇಲ್ಲದವರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ವೃದ್ಧಾಪ್ಯ ವೇತನ 2 ಸಾವಿರ ರೂ. ಅಂಗವಿಕಲರಿಗೆ 3 ಸಾವಿರ ರೂ., ವಿದೇವೆ ವೇತನ 2 ಸಾವಿರ ರೂ. ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಪರಶುರಾಮ್, ಬಳಿಗನೂರು ಬಾಲ ಗಂಗಾಧರ್, ಹುಲಿಕಟ್ಟಿ ಮೈಲಪ್ಪ, ಗುಳೇದಹಟ್ಟಿ ಸಂತೋಷ್, ಹಾರಡ ಪಕೀರಪ್ಪ, ಹುಲಿಕಟ್ಟಿ ಇಬ್ರಾಹಿಂ ಸಾಬ್, ಪಕೀರಪ್ಪ ಹುಲಿಕಟ್ಟಿ, ನಾಗರಾಜ ಬೂದಿಹಾಳ, ನೀಲಮ್ಮ ಹಾಲಮ್ಮ, ಮಂಜಕ್ಕ ಯಾರ್ಡ, ಮಾಂತೇಶಪ್ಪ, ಹೊನ್ನಪ್ಪ ಹಾರ ಕನಾಳ, ರಾಮಚಂದ್ರಪ್ಪ, ಎಚ್.ಪರಸಪ್ಪ, ಸಕ್ರೆ ನಾಯ್ಕ, ಸಣ್ಣ ಹೊನ್ನಪ್ಪ ಇತರರಿದ್ದರು.