ಆಶಾ ದುಡಿಮೆಗೆ ಬೆಲೆ ನೀಡಲಿ

05 MANJU 07
Published on

ಹೊಸಪೇಟೆ: ಆಶಾ ಕಾರ್ಯಕರ್ತೆಯರನ್ನು ಸ್ಕೀಮ್ ಕೆಲಸಗಾರರೆಂದು, ಕೇವಲ ಎರಡು ತಾಸು ಕೆಲಸ ಎಂದು ಅವರನ್ನು ತೆಗೆದುಕೊಂಡು, ಈಗ ದಿನದ 12 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿಸಲಾಗುತ್ತಿದೆ ಎಂದು ಸಂಯುಕ್ತ ಆಶಾ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಹೇಳಿದರು.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿAದ ನಗರದ ಒಳಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದರು.

ಆಳುವ ಸರ್ಕಾರಗಳು ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸದೆ, ಪ್ರೋತ್ಸಾಹ ಧನದ ಹೆಸರಿನಲ್ಲಿ ದುಡಿಸಿಕೊಳ್ಳುತ್ತಿವೆ. ಸರ್ಕಾರಗಳು ದುಡಿಯುವ ಜನರ ಪರವಾಗಿಲ್ಲ. ಬದಲಿಗೆ ಉದ್ಧಮಿಗಳು, ಬಂಡವಾಳಶಾಹಿಗಳ ಪರವಾಗಿವೆ. ಅನೇಕ ಕಾರ್ಮಿಕರ ಹಕ್ಕುಗಳನ್ನು ತಿದ್ದುಪಡಿ ಮಾಡಿ ಮಾಲಿಕರ ಹಿತ ಕಾಪಾಡುತ್ತಿವೆ. ಆಶಾಗಳು ಸೇರಿದಂತೆ ಇಡೀ ಕಾರ್ಮಿಕ ವರ್ಗ ಇಂತಹ ನೀತಿಗಳ ವಿರುದ್ಧ ಬಲಿಷ್ಠವಾದ ಹೋರಾಟ ಕಟ್ಟಿ, ತಮ್ಮ ಹಕ್ಕುಗಳನ್ನು ಗಳಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಷಣ್ಮುಖ ನಾಯಕ್ ಮಾತನಾಡಿ, ಆರೋಗ್ಯ ಇಲಾಖೆ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ, ಆಶಾ ಕಾರ್ಯಕರ್ತೆಯರು ಬೇಕು. ಅವರು ಸೇವೆ ಅತ್ಯಮೂಲ್ಯವಾಗಿದೆ. ಹಾಗಾಗಿ ಆಶಾಗಳ ನ್ಯಾಯ ಸಮ್ಮತ ಬೇಡಿಕೆಗಳು ಈಡೇರಲಿ ಎಂದರು.

ನೂರಾರು ಆಶಾ ಕಾರ್ಯಕರ್ತೆಯರು ಸಮಾವೇಶದ ಮುನ್ನ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಘೋಷಣೆ ಕೂಗುತ್ತಾ ಪುನೀತ್‌ರಾಜ್‌ಕುಮಾರ್ ವೃತ್ತದಿಂದ ಅಂಬೇಡ್ಕರ್ ವೃತ್ತ, ಕಾಲೇಜು ರಸ್ತೆ ಮೂಲಕ ಒಳಕ್ರೀಡಾಂಗಣದ ವರೆಗೆ ಮೆರವಣಿಗೆ ನಡೆಸಿದರು. ಸಮ್ಮೇಳನದಲ್ಲಿ ನೂತನ ಜಿಲ್ಲಾ ಸಮಿತಿ ರಚನೆಯಾಯಿತು. ಡಾ.ಎನ್.ಪ್ರಮೋದ್ (ಗೌರವಾಧ್ಯಕ್ಷ), ಪಿ.ಎ.ಗೀತಾ (ಅಧ್ಯಕ್ಷೆ) ಗೌರಮ್ಮ (ಕಾರ್ಯದರ್ಶಿ), ವೀರಮ್ಮ, ನೇತ್ರಾ, ಮಂಗಳಾ, ನಾಗಮ್ಮ, ಮಹೇಶ್ವರಿ , ಚೆನ್ನಮ್ಮ, ಮಾರೆಕ್ಕ, ಅನ್ನಪೂರ್ಣ, ವೀಣಾ, ಮಂಜುಳಾ(ಉಪಾಧ್ಯಕ್ಷ) ಹಾಗೂ 44 ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net