

ಹೊಸಪೇಟೆ : ಮಹಿಳೆಯರು ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಸ್ವಾವಲಂಬಿಗಳಾಗಬೇಕು ಹಾಗೂ ಈ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಮಟ್ಟದ ಸಂಜೀವಿನಿ ಅಭಿಯಾನ ದ ವತಿಯಿಂದ ಏರ್ಪಡಿಸಲಾದ ಸ್ವ ಸಹಾಯ ಸಂಘದ ಮಹಿಳಾ ಉದ್ಯಮಿ ಗಳು ತಯಾರಿಸಿದಂತ ಮಣ್ಣಿನಿಂದ ತಯಾರಿಸಲಾದ ದೀಪಗಳ ಪ್ರದರ್ಶನ ಹಾಗೂ ಮಾರಾಟ (ದೀಪ ಸಂಜೀವಿನಿ) ಕಾರ್ಯಕ್ರಮವು ಮಾದರಿ ಕಾರ್ಯಕ್ರಮವಾಗಿದೆ ಎಂದು ತಾ.ಪಂ. ಇಒ ಲಕ್ಷ್ಮೀಕಾಂತ್ ಹೇಳಿದರು.
ತಾಲೂಕಿನ ಗಾದಿಗನೂರಿನಲ್ಲಿ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ದೀಪ ಸಂಜೀವಿನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಸಂಘದ ಮಹಿಳೆಯರು ತಯಾರಿಸಲಾದ ದೀಪಗಳು ಮತ್ತು ಇತರೆ ಉತ್ಪನ್ನಗಳು ಮಾರಾಟ ಮಾಡುವ ಮೂಲಕ ಸದಸ್ಯರುಗಳಿಗೆ ಆದಾಯ ಸೃಜನೆ ಆಗುವುದು ಮತ್ತು ಮಹಿಳೆಯರು ಕೈಗೊಂಡ ದೀಪಗಳ ಚಟುವಟಿಕೆ ತಯಾರಿಕೆಗಳಿಗೆ ಪ್ರೊತ್ಸಹ ನೀಡುವ ನಿಟ್ಟಿನಲ್ಲಿ ಉಪಯೋಗವಾಗಬೇಕು. ದೀಪ ಸಂಜಿವೀನಿ ಕಾರ್ಯಕ್ರಮ ಅಯೋಜನೆ ಮಾಡಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದರು.
ಎನ್.ಆರ್.ಎಲ್ ಎಂ-ಸಂಜಿವೀನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕಿ ಕಲಾವತಿ, ಪ್ರಮುಖರಾದ ಎಂ.ಕೋಟ್ರೇಶ್, ಪುಷ್ಪಾ, ಭಾರ್ಗವ, ಸೀತಾರ, ನಾಗರಾಜ್, ಟಿ.ಮಲ್ಲಿಕಾರ್ಜುನ, ಎನ್.ರತ್ನಮ, ಗೌರಿ ಗಣೇಶ, ರೇವತಿ, ರಾಧ, ಶಾಂತ ಇತರರಿದ್ದರು.