ಖಾಸಗಿ ಆಸ್ಪತ್ರೆಗಳಿಗೆ ಮೀರಿಸುವ ಸೇವೆ ನೀಡಿ

13 MANJU 02
Published on

ಹೊಸಪೇಟೆ: ಸರ್ಕಾರಿ ಆಸ್ಪತ್ರೆಗಳಿಗೆ ಬಡವರೆ ಹೆಚ್ಚಾಗಿ ಬರುತ್ತಾರೆ. ಅವರಿಗೆ ಹಣಕ್ಕಾಗಿ ಪೀಡಿಸದೇ, ಗೌರವದಿಂದ ನಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಎಚ್ಚರಿಕೆ ನೀಡಿದರು.

ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬುಧವಾರ ದಿಡೀರ್ ಭೇಟಿ ಪರಿಶೀಲಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಗೆ ಭೇಟಿ ನೀಡುವ ಎಲ್ಲ ರೋಗಿಗಳೊಂದಿಗೆ ಹಾಗೂ ಅವರೊಂದಿಗೆ ಬಂದ ಪಾಲಕರೊಂದಿಗೆ ಗೌರವಯುತವಾಗಿ ಮಾತನಾಡಿಸಬೇಕು. ಆಸ್ಪತ್ರೆಗೆ ಬಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಯಾವುದೇ ಕಾರಣಕ್ಕೂ ತಪಾಸಣೆ ಅಥವಾ ಔಷಧ ಪಡೆಯುವ ವೇಳೆ ಸರತಿ ಸಾಲಿನಲ್ಲಿ ನಿಲ್ಲಿಸದಂತೆ ಪ್ರತ್ಯೇಕ ಟೋಕನ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ದುರಸ್ತಿಯಲ್ಲಿರುವ ಅಲ್ಟಾç ಸೌಂಡ್ ಸ್ಕಾö್ಯನರ್ ಉಪಕರಣವನ್ನು ಉಪಯೋಗಿಸದೇ ಇಟ್ಟಿರುವುದನ್ನು ಗಮನಿಸಿ, ತಕ್ಷಣೇ ಸದರಿ ಉಪಕರಣವನ್ನು ಸರಿಪಡಿಸಿ ಗರ್ಭಿಣಿಯರಿಗೆ ಉಚಿತವಾಗಿ ಸ್ಕಾö್ಯನಿಂಗ್ ಮಾಡಲು ಮತ್ತು ಈ ಸಂಬAಧ ಗೋಡೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಎದ್ದು ಕಾಣುವ ರೀತಿಯಲ್ಲಿ ನಿಯಮಾನುಸಾರ ನಾಮಫಲಕಗಳನ್ನು ಅಳವಡಿಸಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ಪಾಲಕರು ಜನನ ಪ್ರಮಾಣ ಪತ್ರ ಪಡೆಯುವ ಸಂಬAಧ ಸರ್ವರ್ ಸಮಸ್ಯೆಗಳಿಂದಾಗಿ ಸುಮಾರು ಮೂರು ತಿಂಗಳಿನಿAದ ಬಾಕಿ ಇದ್ದುಮ ಪ್ರಮಾಣ ಪತ್ರಗಳನ್ನು ಪಡೆಯಲು ಸಾರ್ವಜನಿಕರು ಅಲೆದಾಡುತ್ತಿದ್ದು, ಸರ್ವರ್ ಸಮಸ್ಯೆ ಬಗೆಹರಿದ ನಂತರ ಎಲ್ಲಾ ಪಾಲಕರುಗಳ ವಿಳಾಸಕ್ಕೆ ಪೋಸ್ಟ್ ಮೂಲಕ ಕಳಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಸಾರ್ವಜನಿಕರು ಪ್ರಮಾಣ ಪತ್ರಕ್ಕಾಗಿ ಆಸ್ಪತ್ರೆಗೆ ವಿನಾಃ ಕಾರಣ ಅಲೆದಾಡದಂತೆ ತಿಳಿಹೇಳಿದರು.

ಆಸ್ಪತ್ರೆಯ ಮೇಲ್ಮಹಡಿಯಲ್ಲಿ ಉಪಯೋಗಿಸದೇ ಖಾಲಿ ಇದ್ದ ಎರಡು ಕೊಠಡಿಗಳನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ, ಹವಾ ನಿಯಂತ್ರಿತ ಕೊಠಡಿಗಳನ್ನಾಗಿ ಮಾಡಿದ್ದು, ಇವುಗಳಲ್ಲಿ ಒಟ್ಟು 40 ಹಾಸಿಗೆಗಳಲ್ಲಿ ಸಿಜೇರಿಯನ್ ಮೂಲಕ ಜನಿಸಿದ ಮಕ್ಕಳ ಆರೈಕೆ ಮಾಡಲಾಗುತ್ತಿದೆ. ಖಾಲಿ ಇದ್ದ ಕೊಠಡಿಗಳಲ್ಲಿ ರೋಗಿಗಳ ಶಸ್ತ್ರ ಚಿಕಿತ್ಸೆಯ ನಂತರ ಆರೋಗ್ಯೋಪಚಾರ ಪಡೆಯಲು ಕ್ರಮವಹಿಸಲಾಗಿದೆ. ಖಾಸಗಿ ಆಸ್ಪತ್ರೆಗಳನ್ನು ಮೀರಿಸುವಂತೆ ಸೇವೆ ನೀಡುವುದೇ ನಮ್ಮ ಗುರಿ. ಜನರು ಸಮಸ್ಯೆಗಳಿಂದ ಅಲೆದಾಡದಂತೆ ಕ್ರಮವಹಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net