

ಹೊಸಪೇಟೆ: ವಿದ್ಯಾಭ್ಯಾಸ ಮಾಡುವುದರ ಜತೆಗೆ ಸ್ವಾ ಅವಲಂಬನೆಯಾಗಿ ಬದುಕು ಕಟ್ಟಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎಂ ಎಸ್ ದಿವಾಕರ ಹೇಳಿದರು.
ಹೆಣ್ಣು ಮಕ್ಕಳ ರಾಷ್ಟ್ರೀಯ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಸಂಸ್ಥೆಯ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ದಶಮಾನೋತ್ಸವದ ಕಾರ್ಯಕ್ರಮದ ಜಾಗೃತಿ ಜಾತಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ರಕ್ಷಣೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿವೆ. ನೀವು ಅವುಗಳ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಉನ್ನತವಾಗಿ ಬದುಕಬೇಕು, ನೀವು ಓದುವ ಶಾಲೆಗೂ ಮತ್ತು ಊರಿಗೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದರು.
ಈ ವೇಳೆ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ ಅವರ ತಾಯಿ ನಾಗರತ್ನಮ್ಮ, ಜಿ.ಪಂ ಸಿಇಒ ನೊಂಗ್ಜಾಯ್ ಮೊಹಮ್ಮದ ಅಲಿ ಅಕ್ರಂ ಷಾ ಅವರ ತಾಯಿ ಸಫೀನಾ ಹೆಸರುಗಳಲ್ಲಿ ಕಚೇರಿ ಆವರಣದಲ್ಲಿ ಸಸಿಗಳನ್ನ ನೆಡಲಾಯಿತು.
ನಂತರ ಸಾಯಿ ಬಾಬಾ ವೃತ್ತದ ಮೂಲಕ ವಿಜ್ಞಾನ ಕಾಲೇಜಿನ ವರೆಗೆ ಜಾಗೃತಿ ಜಾತ ನಡೆಯಿತು. ಆನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಎಎಸ್ಪಿ ಸಲೀಂ ಪಾಷ, ಜಿಲ್ಲಾ ನಿರೂಪಣಾ ಅಧಿಕಾರಿ ಸುಭದ್ರಾ ದೇವಿ, ಸಿಡಿಪಿಒ ಸಿಂದು ಅಂಗಡಿ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಯು.ಭೀಮರಾಜ, ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ಅಂಬುಜಾ, ಜಿಲ್ಲಾ ಮಿಶನ್ ಸಂಯೋಜಕರಾದ ಶಿವಣ್ಣ, ನೇತ್ರಾ ಹರ್ತಿ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಮಕ್ಕಳ ರಕ್ಷಾಧಿಕಾರಿ ಗಂಗಾಧರ ಡೊಳ್ಳಿನ, ವಿಜ್ಞಾನ ಕಾಲೇಜ್‌ನ ನಿರ್ದೇಶಕಿ ವಿನುತಾ, ಪ್ರಾಂಶುಪಾಲೆ ಫರೀದಾ, ಆಡಳಿತ ಅಧಿಕಾರಿ ಕಿರಣ್ ಇತರರಿದ್ದರು.