ಸತ್ಯ ಅರಿಯವು ಪತ್ರಕರ್ತ ಅರಿಯಲಿ

Oplus_0
Oplus_0
Published on

ಹೊಸಪೇಟೆ; ಕಣ್ಣಿಗೆ ಕಾಣುವುದೇಲ್ಲ ಸತ್ಯವಲ್ಲ. ತ್ರಿಕಾಲದಲ್ಲಿ ಇರುವುದೇ ಸತ್ಯ, ಇಲ್ಲದು ಅದು ಅಸತ್ಯ. ಸತ್ಯ ಅರಿಯದೇ ಇದ್ದಾಗ ಮನುಷ್ಯನಿಗೆ ಒತ್ತಡ ಹೆಚ್ಚಾಗುತ್ತದೆ ಎಂದು ಕೊಪ್ಪಳ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿAದ ನಗರದ ಸಾಯಿಲಿಲಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರಿಗೆ ಸಂದಿಗ್ಧತೆ ಹೆಚ್ಚಿರುತ್ತದೆ. ಸಮಾಜದಲ್ಲಿ ಭ್ರಮೆ ಹಾಗೂ ಆಲಸ್ಯದಿಂದ ಇರಬಾರದು. ಪತ್ರಕರ್ತರು ಕತ್ತಲೆ ಹೋಗಲಾಡಿಸಲು ಸತ್ಯ ಎಂಬ ಹಣತೆ ಹಚ್ಚಿದರೆ ಸಾಕು ಸಾಮಾಜದಲ್ಲಿ ಬೆಳಕಾಗುತ್ತದೆ. ದೇಶ ನಾಡು ಅಭಿವೃದ್ಧಿ ಆಗಬೇಕು ಎಂದರೆ ಎಲ್ಲರ ಜವಾಬ್ದಾರಿ ಮುಖ್ಯ. ದೇಶ, ನಾಡು ಕಟ್ಟುವ ಕೆಲಸ ಆಗಬೇಕಿದೆ. ಆತ್ಮಸಾಕ್ಷಿಯಿಂದ ಕಾರ್ಯ ನಿರ್ವಹಿಸಬೇಕಿದೆ. ಪತ್ರಕರ್ತ ತಕ್ಕಡಿಯಂತಿರಬೇಕು. ಕರ್ತ ಎಂದರೆ ದೇವರು. ಆ ನಾಮ ಸುದ್ದಿ ಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತನಿಗೆ ಮಾತ್ರ ಹೇಳುತ್ತಾರೆ ಎಂದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಲೋಕದ ಡೊಂಕು ತಿದ್ದಲು ಹೋಗಿ ನೀವು ಡೊಂಕಾಗಬೇಡಿ. ಪತ್ರಕರ್ತರು ಸಾರ್ವಜನಿಕರಿಗೆ ಸತ್ಯದ ಸಮಾಚಾರ ಮುಟ್ಟಿಸಬೇಕು. ದ್ವೇಶದ ಭಾವನೆಗಳನ್ನಲ್ಲ. ಸಮಾಜಕ್ಕೆ ಪತ್ರಕರ್ತ ಕಿವಿ ಮತ್ತು ಕಣ್ಣುಗಳಿದ್ದಂತೆ. ಪತ್ರಿಕೆಗಳು ಇನ್ನೂ ಘಟನೆ ಉಳಿಸಿಕೊಂಡಿವೆ. ಸರ್ಕಾರ, ಅಧಿಕಾರಿ, ಜನ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುವ ಪತ್ರಕರ್ತರಾಗಬೇಕು ಎಂದರು.

ರಾಜ್ಯಾಧ್ಯಕ್ಷ ಶಿವಾನಂದ ತಗಡುರು ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ದೇಶಕ್ಕಾಗಿ ಪತ್ರಿಕೆ ಬರುತ್ತಿದ್ದರು. ಆದರೆ, ಸಮಾಜದಲ್ಲಿ ಗುರುತಿಸಿಕೊಳ್ಳಲು ಬರುವ ಪತ್ರಕರ್ತರಾಗುತ್ತಿದ್ದಾರೆ. ನೈಜ ಪತ್ರಕರ್ತರ ಗೌರವಕ್ಕೆ ಬರುತ್ತಿದೆ. ಜನರ ಕನಸು ಕಟ್ಟುವ ಪತ್ರಕರ್ತರಾಗಬೇಕಿದೆ. ಜನಪರ ವರದಿಗಳಿಗೆ ಆದ್ಯತೆ ನೀಡ ಬೇಕಿದು. ಪತ್ರಕರ್ತರ ಬೇಡಿಕೆಗಳನ್ನು ಈಡೇಸಬೇಕಿದೆ ಎಂದರು.

ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ವಾರ್ತಾಧಿಕಾರಿ ಧನಂಜಯಪ್ಪ, ಕಾನಿಪ ಪ್ರಧಾನ ಕಾರ್ಯದರ್ಶಿ ಲೋಕೇಶ್, ರಾಜ್ಯ ಸಮಿತಿ ಸದಸ್ಯ ವೆಂಕೋಬ ಪೂಜಾರ, ಪತ್ರಕರ್ತರಾದ ಲಕ್ಷ್ಮೀ ನಾರಾಯಣ, ಜಿಲ್ಲಾ ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net