

ಹೊಸಪೇಟೆ: ದಾವಣಗೆರೆ-ಹೊಸಪೇಟೆ ಮಾರ್ಗದ ಪ್ಯಾಸೆಂಜರ್ ರೈಲನ್ನು ಸೆ.15ರಿಂದ ರದ್ದು ಪಡಿಸಿರುವ ಆದೇಶ ಹಿಂಪಡೆದು, ಕೂಡಲೇ ಮರು ಆರಂಭಿಸುವಂತೆ ಕೊಟ್ಟೂರಿನ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪತ್ತಿಕೊಂಡ ಶ್ರೀಧರ್ ಶೆಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯವಸ್ಥಾಪಕಗೆ ಪತ್ರ ಬರೆದಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವ ಸಮಯಕ್ಕೆ ರೈಲನ್ನು ಓಡಿಸದ ಕಾರಣ ಹೆಚ್ಚಿನ ಜನರಿಗೆ ತೊಂದರೆಯಾಗಿದೆ. ಸರಿಯಾದ ಸಮಯಕ್ಕೆ ರೈಲು ಓಡಿಸಿದರೆ ಪ್ರಯಾಣಿಕರು ಸಂಚರಿಸುತ್ತಾರೆ. ಏಕಾಏಕಿ ಆದಾಯವಿಲ್ಲ ಎಂಬ ಕಾರಣ ನೀಡಿ ರೈಲು ಸಂಚಾರ ರದ್ದುಪಡಿಸಿರುವುದು ಸರಿಯಾದ ಕ್ರಮವಲ್ಲ. ಬೆಳಗ್ಗೆ ಏಳು ಗಂಟೆಗೆ ಎರಡೂ ಕಡೆಯಿಂದ ಮತ್ತು ಕನಿಷ್ಠ ಎರಡು ಬಾರಿ ದಿನಕ್ಕೆ ಸಂಚರಿಸಲು ಕ್ರಮವಹಿಸಬೇಕು. ಕೋವಿಡ್ 19 ಕಾರಣದಿಂದಾಗಿ ವಿಜಯಪುರ-ಯಶವಂತಪುರ ನಡುವಿನ ಎಕ್ಸ್‌ಪ್ರೆಸ್ ರೈಲು ರದ್ದುಗೊಳಿಸಲಾಗಿದೆ. ಈ ರೈಲನ್ನೂ ಮರು ಆರಂಭೀಸಬೇಕು ಎಂದು ಒತ್ತಾಯಿಸಿದ್ದಾರೆ.