ಟಿಬಿಡ್ಯಾಂ ಉಳಿದ ಗೇಟ್ ಗಳಿಗೂ ಇ- ಟೆಂಡರ್

TBDAM
ತುಂಗಭದ್ರಾ ಜಲಾಶಯ
Published on

ಹೊಸಪೇಟೆ: ತುಂಗಭದ್ರಾ ಜಲಾಶಯದ 32 ಕ್ರಸ್ಟ್ ಗೇಟ್ ಗಳನ್ನು ಬದಲಿಸಿ ಹೊಸ ಗೇಟ್ ಸ್ಥಾಪಿಸಲು ತುಂಗಭದ್ರಾ ಮಂಡಳಿ ಇ- ಟೆಂಡರ್ ಆಹ್ವಾನಿಸಿದೆ.

ತುಂಗಭದ್ರಾ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್ ಗಳನ್ನು ಬದಲಿಸಲು ಎನ್ ಡಿಟಿ ಸರ್ವಿಸ್ ಸಂಸ್ಥೆ ಹಾಗು ಆಂಧ್ರಪ್ರದೇಶದ ಪರಿಣತ ತಜ್ಞ ಕನ್ನಯ್ಯ ನಾಯ್ಡು ಕೂಡ ಜಲಾಶಯದ ಗೇಟ್ ಗಳನ್ನು ಬದಲಿಸಲು ಸಲಹೆ ನೀಡಿದ್ದರು. ಇದರನ್ವಯ ತುಂಗಭದ್ರಾ ಮಂಡಳಿ ಸಭೆ ನಡೆಸಿ 32 ಗೇಟ್ ಗಳನ್ನು ಬದಲಿಸಲು ಟೆಂಡರ್ ಕರೆಯಲು ಸೂಚಿಸಿತ್ತು. ಮಂಡಳಿ ಕಾರ್ಯದರ್ಶಿ ಈಗ ಇ- ಟೆಂಡರ್ ಆಹ್ವಾನಿಸಿದೆ. ಮೇ.02 ರಂದು ಪ್ರಕ್ರಿಯೆ ನಡೆಯಲಿದೆ.

ಜಲಾಶಯದ 19ನೇ ಗೇಟ್ ನ ಸ್ಟಾಪ್ ಲಾಗ್ ತೆಗೆದು ಕ್ರಸ್ಟ್ ಗೇಟ್ ನಿರ್ಮಿಸಲು ಗುಜರಾತ್ ಮೂಲದ ಹಾರ್ಡವೇರ್ ಟೂಲ್ಸ್ ಆಯ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಈ ವಾರದಲ್ಲೇ ಅಳವಡಿಕೆ ಕಾರ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net