ಟಿಬಿಡ್ಯಾಂ ಗೇಟ್ ಮುಹರ್ತ ಫಿಕ್ಸ್

16 MANJU 06
Published on

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ ಬದಲಿಸಲು ಟಿಬಿಬಿ ಮಂAಡಳಿಯಿAದ ಟೆಂಡರ್ ಕರೆಯಲಾಗಿದ್ದು, ಏ.17ರ ಗುರುವಾರ ಯಾವ ಸಂಸ್ಥೆಗೆ ಹೋಗಲಿದೆ ಎಂದು ತಿಳಿಯಲಿದೆ.

ತ್ರಿವಳಿ ರಾಜ್ಯಗಳ ರೈತರ ಜೀವನಾಡಿ 19ನೇ ಕ್ರಸ್ಟ್ಗೇಟ್ ಕಳಚಿ ಒಂಬತ್ತು ತಿಂಗಳ ಬಳಿಕ ಆಂದ್ರದ ಕೆಎಸ್-ಎನ್‌ಡಿಟಿ ತಜ್ಞರ ತಂಡ ಕೆಲ ದಿನಗಳ ಹಿಂದೆ ಜಲಾಶಯದ ಎಲ್ಲ ಕ್ರ‍್ರಸ್ಟ್ಗೇಟ್‌ಗಳ ಬದಲಾವಣೆಗೆ ಸೂಚನೆ ನೀಡಿದೆ. ಈ ಪೈಕಿ ಸಧ್ಯ 19ನೇ ಗೇಟ್ ಮಾತ್ರಕ್ಕೆ ಇ-ಟೆಂಡರ್ ಕರೆಯಲಾಗಿದೆ. ಏ.17ಕ್ಕೆ ತಿಳಿಯಲಿದೆ. ಟೆಂಡರ್ ಆಗುವ ಕಂಪನಿ ಜತೆ ಏ.20ರ ಒಳಗೆ ಒಪ್ಪಂದ ಮಾಡಿಕೊಂಡು 19ನೇ ಗೇಟ್ ಮಾತ್ರ ಬದಲಿಸುವ ಕಾಮಗಾರಿ ನಡೆಯಲಿದೆ.

ಟಿಬಿಬಿ ಅಧ್ಯಕ್ಷ ಎಸ್.ಎನ್.ಪಾಂಡೆ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಉಳಿದ 32 ಗೇಟ್‌ಗಳ ಇ-ಟೆಂಡರ್ ಕರೆಯಲು ಸಭೆಯಲ್ಲಿ ಅನುಮೊದನೆ ಸಿಕ್ಕಿದ್ದು ಶೀಘ್ರದಲ್ಲೇ ಪ್ರಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net