ದಲಿತ ಅಧಿಕಾರಿಗಳ ವರ್ಗವಣೆ ಸಲ್ಲ

25 MANJU 03
Published on

ಹೊಸಪೇಟೆ: ಮಾದಿಗ ಅಧಿಕಾರಿಗಳು ಎಂದು ಕೀಳರಿಮೆಯಿಂದ ವರ್ಗಾವಣೆ ಸೇರಿದಂತೆ ವಿವಿಧ ರೀತಿಯ ಕಿರುಕುಳ ನೀಡುತ್ತಿರುವುದು ಶೋಭೆಯಲ್ಲ ಎಂದು ವಿಜಯನಗರ ಜಿಲ್ಲೆ ಮಾದಿಗ ಮಹಾಸಭಾ ಗೌರಾವಾಧ್ಯಕ್ಷ ಎ.ಬಸವರಾಜ್ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾದಿಗ ಸಮುದಾಯದ ಆಯಕಟ್ಟಿನಲ್ಲಿ ಇರುವಂತಹ ಅಧಿಕಾರಿಗಳಿಗೆ ಉದ್ದೇಶಪೂರ್ವಕವಾಗಿ ಶಾಸಕ ಎಚ್.ಆರ್.ಗವಿಯಪ್ಪ ಅವರ ಪುತ್ರರಾದ ಗುರುರಾಜ್, ವಿರೂಪಾಕ್ಷಿ ಹಾಗೂ ಆಪ್ತ ಬೆಂಬಲಿಗರು ಕಿರುಕುಳ ನೀಡುತ್ತಿದ್ದಾರೆ. ನಗರಸಭೆಯಲ್ಲಿ ಈ ಹಿಂದೆ ಆರ್.ಓ.ಗಳಾದ ರಾಮಪ್ಪ, ನಾಗಭೂಷಣ, ನಾಗರಾಜ ಅವರ ಮೇಲೆ ನಿರಂತರವಾಗಿ ನೀಡಿದಂತಹ ಕಿರುಕುಳ ಬೀಡಲಾಗುತ್ತಿದೆ. ನಗರಸಭೆ ಪೌರಾಯುಕ್ತ ಚಂದ್ರಪ್ಪ ಮಾದಿಗ ಎಂದು ಅವಧಿ ಮುನ್ನ ವರ್ಗಾವಣೆ ಮಾಡಿದ್ದರು. ಇದಕ್ಕೆ ಚಂದ್ರಪ್ಪ ಅವರು ನ್ಯಾಯಾಲಯದ ತಡೆ ತಂದಿದ್ದಾರೆ. ಆದರೂ ಇವರಿಗೆ ಬೆದರಿಕೆ ಕರೆಗಳು ಬರುತ್ರೀವೆ. ನಗರಸಭೆಯಲ್ಲಿ ಗ್ರೇಡ್ 1 ದರ್ಜೆಯ ಅಧಿಕಾರಿಗಳೇ ಇರಬೇಕು. ಆದರೆ ಶಾಸಕರು ಮತ್ತು ಶಾಸಕರ ಪುತ್ರರು ಎಸಿ ದರ್ಜೆಯಲ್ಲಿರುವ ಅಧಿಕಾರಿಯನ್ನು ಬೆಂಬಲಿಸುತ್ತಿದ್ದಾರೆ. ಈ ಹಿಂದೆ ತಹಸೀಲ್ದಾರ್ ಆಗಿದ್ದ ವಿಶ್ವಜಿತ್ ಮೆಹತಾ ರವರನ್ನು ಕೂಡ ಅವಧಿ ಮುಗಿಯುವ ಮುನ್ನ ವರ್ಗಾವಣೆ ಮಾಡಿದರು. ಶಾಸಕರ ಪುತ್ರರು ಆರು ತಿಂಗಳು, ವರ್ಷದ ಒಳಗೆ ಮಾದಿಗ ಸಮುದಾಯದ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಸಂಪ್ರದಾಯದ ಮಾಡಿಕೊಂದ್ದಾರೆ. ಕಾನೂನಾತ್ಮಕವಾಗಿ ವರ್ಗಾವಣೆ ಮಾಡದೇ, ದಂದೆಯಾಗಿ ಮಾಡಿಕೊಂಡಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ದೌರ್ಜನ್ಯ ದಬ್ಬಾಳಿಕೆ ಅಸ್ತಕ್ಷೇಪ ನಿಲ್ಲಲಿ. ಮಾದಿಗ ಸಮಾಜದ ಅಧಿಕಾರಿಗಳ ಮೇಲೆ ನಡೆಯುತ್ತಿರುವ ಬೆದರಿಕೆಗಳು ನಿಲ್ಲಲಿ. ಈ ಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕು ಎಂದು ಎಚ್ಚರಿಸಿದರು.

ಮಹಾಸಭಾದ ಅಧ್ಯಕ್ಷ ಎಚ್.ಶೇಷಾ, ಕಾರ್ಯದರ್ಶಿ ಶ್ರೀನಿವಾಸ್, ರಾಘವೇಂದ್ರ, ಭರತ್ ಕುಮಾರ್, ಷಣ್ಮುಖ, ಈರಣ್ಣ, ರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net