ಸೈಕಲ್‌ನಲ್ಲಿ ಡಿಸಿ ನಗರ ಪ್ರದಕ್ಷಿಣೆ

08 MANJU 03
Published on

ಹೊಸಪೇಟೆ: ಎರಡನೇ ಶನಿವಾರ ರಜೆ ಹಿನ್ನೆಲೆಯಲ್ಲಿ sಸಾರ್ವಜನಿಕ ಸಮಸ್ಯೆ ಅರಿಯಲು ಸೈಕಲ್‌ನಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ನಗರ ಪ್ರದಕ್ಷಿಣೆ ಹಾಕಿದರು.

ಮುಂಗಾರು ಮಳೆ ಶುರುವಾಗಿದ್ದು, ನಗರದ ರಾಜ ಕಾಲುವೆಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಇತರೆ ಕಸ ಕಡ್ಡಿಗಳಿಂದ ನೀರು ನಿಂತು ರಸ್ತೆ ಮೇಲೆ ಹರಿಯುತ್ತಿತ್ತು. ಇದರಿಂದಾಗಿ ಹಮ್ಮಿಕೊಂಡ ನಗರದ ಸ್ವಚ್ಛತಾ ಕಾರ್ಯ ಪರಿಶೀಲಿಸಿದರು. ನಗರದ ಕೆಲ ವಾರ್ಡ್ಗಳಿಗೆ ಭೇಟಿ ನೀಡಿ ಸಾರ್ವಜನಿಕಗೆ ಕುಡಿವ ನೀರಿನ ಸರಬರಾಜು ಮತ್ತು ಸ್ವಚ್ಛತೆಯ ಹೇಗಿದೆ ಎಂದು ಸೈಕಲ್ ನಲ್ಲೇ ಪರಿಶೀಲಿಸಿದರು.

ಮುಖ್ಯ ರಸ್ತೆಗಳ ಸ್ವಚ್ಛತೆಗೆ ಹೆಚ್ವಿನ ಆದ್ಯತೆ ನೀಡಬೇಕು. ಕೆಲಸಗಾರರ ಗುಂಪುಗಳನ್ನು ರಚಿಸಿ ಆರೋಗ್ಯ ನಿರೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ರಸ್ತೆಯಲ್ಲಿನ ಅಲ್ಲಲ್ಲಿ ಗುಂಡಿಗಳನ್ನು ಬಿದ್ದಿದ್ದು ಅವುಗಳನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಗೆ ತಿಳಿಸಿದ ಜಿಲ್ಲಾಧಿಕಾರಿ ನಂತರ ಪೌರಕಾರ್ಮಿಕರ ವಾಸಿಸುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಅವರ ಕುಟುಂಬಗಳ ಆವಾಲನ್ನು ಸ್ವೀಕರಿಸಿದರು. ಈ ಪ್ರದೇಶದಲ್ಲ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕೈಗೊಳ್ಳಲು ತಿಳಿಸಿದರು.

ಲೈಸೆನ್ಸ್ ಇಲ್ಲದ ಲಾಡ್ಜ್ ಗೆ ನೋಟಿಸ್

ನಗರದ ಪ್ರದಕ್ಷಿಣೆ ವೇಳೆಯಲ್ಲಿ ವಿಶ್ವ ಲಾಡ್ಜ್ ಮುಂದೆ ಚರಂಡಿ ನೀರು ನಿಂತು ಬಸ್ ಸ್ಟಾಂಡ್ ಮುಂಭಾಗ ಹರಿಯುತ್ತಿರುವುದು ಗಮನ ಹರಿಸಿದ ಜಿಲ್ಲಾಧಿಕಾರಿ, ಲಾಡ್ಜ್ ಒಳಗೆ ಹೋಗಿ ಪರಿಶೀಲಿಸಿದರು. ಆದರೆ ಟ್ರೇಡ್ ಲೈಸೆನ್ಸ್ ಇಲ್ಲದೆ ಲಾಡ್ಜ್ ನಡೆಸುತ್ತಿರುವುದು ಗಮನಕ್ಕೆ ಬಂತು. ಇನ್ನು ಕೆಲವು ನಗರಸಭೆ ನಿಯಮ ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂತು. ಕೂಡಲೇ ನೋಟಿಸ್ ನೀಡಿ ಕ್ರಮಕ್ಕೆ ಪೌರಾಯುಕ್ತರಿಗೆ ತಿಳಿಸಿದರು.

ಬಸ್ ಸ್ಟಾಂಡ್ ನೋಡಿ ಗರಂ

ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಸ್ವಚ್ಛತೆ ಎಂಬುದು ಮಾಯವಾಗಿತ್ತು. ಅಲ್ಲಿಂದ ಒಳಚರಂಡಿ ನೀರು ಬಸ್‌ನಿಲ್ದಾಣಕ್ಕೆ ಹರಿಯುತ್ತಿರುವುದನ್ನು ಕಂಡು ಗರಮಾದರು. ಇಷ್ಟೊಂದು ಕೆಟ್ಟ ವಾಸನೆ ಇದ್ದರೂ ಡಿಪೋ ಮ್ಯನೇಜರ್ ಯಾವುದೇ ಕ್ರಮ ವಹಿಸದೆ ಇರುವುದನ್ನು ಆಕ್ಷೇಪ ವ್ಯಕ್ತಪಡಿಸಿದರು. ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತ ಚಂದ್ರಪ್ಪ ಸೂಚಿಸಿದರು.

ಶಿಕ್ಷಕರಿಗೆ ನೋಟಿಸ್

ಪ್ರದಕ್ಷಿಣೆ ಸಮಯದಲ್ಲಿ ಅನಿರೀಕ್ಷಿತವಾಗಿ ವಿವೇಕಾನಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಶನಿವಾರ 8 ಗಂಟೆ ಯಾದರೂ ಯಾವೊಬ್ಬ ಶಿಕ್ಷಕರು ಶಾಲೆಯಲ್ಲಿ ಬಂದಿರಲಿಲ್ಲ. ಸರ್ಕಾರದ ನಿಯಮಾನಸಾರ 7.30 ಕ್ಕೆ ಹಾಜರಿದ್ದು ನಂತರ ಪ್ರಾರ್ಥನೆ ಮುಗಿಸಿ ತರಗತಿಗಳನ್ನು ಆರಂಭಿಸಬೇಕು. ಹಾಗಾಗಿ ಸಮಯಕ್ಕೆ ಗೈರು ಹಾಜರಾದ ಎಲ್ಲ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ವಿವರಣೆ ಮಾಡಿ ನಿಯಮಾನುಸಾರ ಕ್ರಮಕೈಗೊಳ್ಳಲು ಡಿಡಿಪಿಐಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net