ವಂಚಕ ಟ್ರ್ಯಾಕ್ಟರ್ ಉದ್ಯಾಮಿಯಿಂದ ಬಂಧಿಸಿ

Published on

ಹೊಸಪೇಟೆ: ಹಗರಿಬೊಮ್ಮನಹಳ್ಳಿಯ ಅಕ್ಷತಾ ಮೋಟರ್ಸ್ ಮಾಲಿಕನಿಂದ ಕೊಟ್ಟೂರಿನ ರೈತ ಅಂಜಿನಪ್ಪ ಅವರಿಗೆ ಟ್ರಾö್ಯಕ್ಟರ್ ಲೋನ್ ವಂಚನೆಯಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ನಾಗಯ್ಯ ಎಂದು ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂಜಿನಪ್ಪ ಅವರು 2023ರಲ್ಲಿ ಹಗರಿಬೊಮ್ಮನಹಳ್ಳಿ ಅಕ್ಷತಾ ಮೋಟಾರ್ಸ್ನಲ್ಲಿ ಟ್ರ‍್ಯಾಕ್ಟರ್ ಖರೀದಿಸಲು ಡೌನ್ ಪೇಮೆಂಟ್ 2.26 ರೂ. ಪಾವತಿಸಿದ್ದಾರೆ. ನಂತರ ಹೊಸಪೇಟೆಯ ರಾಯಲ್ ಸುಂದರA ಪೈನಾನ್ಸ್ನಿಂದ 8 ಲಕ್ಷ ರೂಗಳನ್ನು ಜಮಾ ಮಾಡಿಸಿದ್ದಾರೆ. ಆದರೆ, ಅಂಜಿನಪ್ಪ ಹೆಸರಿಗೆ ಖರೀದಿಯಾದ ಟ್ರ‍್ಯಾಕ್ಟರ್ ನೀಡದೆ, ಶೋರೂಂ ಮಾಲಿಕ ಬಳಸಿಕೊಂಡಿದ್ದಾರೆ. ಪೈನಾನ್ಸ್ನ 1.25 ಲಕ್ಷ ರೂ. ಮೊದಲ ಕಂತನ್ನು ಕೂಡ ಪಾವತಿ ಮಾಡಿದ್ದಾರೆ. ಎರಡನೇ ಪೈನಾನ್ಸ್ ಕಂತುಗಳನ್ನು ಕಟ್ಟದೆ ಮಧು ರವರು ರಾಯಲ್ ಸುಂದರA ಪೈನಾನ್ಸ್ ನವರಿಗೆ ಟ್ರ‍್ಯಾಕ್ಟರ್‌ನ್ನು ಮುಟ್ಟುಗೋಲಿಗೆ ಹಾಕಿದ್ದಾರೆ. ಪೈನಾನ್ಸ್ ಕಂಪನಿಯಿAದ ಅಂಜಿನಪ್ಪಗೆ ನೋಟೀಸ್ ಜಾರಿ ಮಾಡಿದ್ದಾರೆ. ಅಕ್ಷತಾ ಮೋಟಾರ್ಸ್ ಮಾಲೀಕ ಮಧು ಮತ್ತು ಟ್ರಾö್ಯಕ್ಟರ್ ಕಂಪನಿಯ ವಿರುದ್ಧ ಕೊಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ ಅಂಜಿನಪ್ಪ ರೈತನಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ದಾಸರ ವೆಂಕಟೇಶ, ಗೌವಾಧ್ಯಕ್ಷ ಪಿ.ಸೋಮಾಪ್ಪ, ಕರಿ ಬಸವರಾಜ, ಎಂ.ದ್ಯಾಮಪ್ಪ, ಬಿ.ಗಂಗಾಧರ, ಮಂಜುನಾಥ, ಕಾಳೇಶ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net