ನಮ್ಮ ಸೇವೆ ಮುಂದಿನ ಪಿಳಿಗೆಗೆ ಮಾದರಿಯಾಗಲಿ

28 MANJU 05
Published on

ಹೊಸಪೇಟೆ : ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಅಂದಾಜು 28.52 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಆಸ್ಪತ್ರೆ ಭೂಮಿ ಪೂಜೆ ಮಾಡಲಾಗಿದೆ ಎಂದು ಸಂಸದ ಈ.ತುಕಾರಾಮ್ ಹೇಳಿದರು.

ನಗರದ ಹೊರವಲಯದಲ್ಲಿ ಶನಿವಾರ 28.52 ಕೋಟಿ ರೂ. ವೆಚ್ಚದ 50 ಹಾಸಿಗೆಯ ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ಮತ್ತು ಶಿಕ್ಷಣ ಹೆಚ್ಚಿನ ಆದ್ಯತೆ ನೀಡುವೆ. ಶಿಕ್ಷಣ ಜೀವನ ನೀಡಿದರೆ, ಆರೋಗ್ಯ ಮರುಜೀವ ನೀಡುತ್ತದೆ. ಕೊಟ್ಟೂರಿನಲ್ಲಿ ಕೂಡ 50 ಬೇಡ್ ಆಸ್ಪತ್ರೆ ಅನುಮೋದನೆಯಾಗಿದೆ. ಇಲ್ಲಿ ಟಿಬಿಡ್ಯಾಂ, ಮೈನಿಂಗ್, ಕಾರ್ಖಾನೆಗಳಿವೆ ಜಿಲ್ಲೆ ಅಭಿವೃದ್ಧಿ ಪಡಿಸೊಣ. ನಮ್ಮ ಸೇವೆ ಮುಂದಿನ ಪಿಳಿಗೆಗೂ ಉಪಯೋಗ ಆಗಲಿ ಎಂದರು.

ಶಾಸಕ ಗವಿಯಪ್ಪ ಮಾತನಾಡಿ, ಇಲ್ಲಿನ 100 ಬೆಡ್ ಆಸ್ಪತ್ರೆಯಲ್ಲಿ 600 ಕ್ಕೂ ಅಧಿಕ ರೋಗಿಗಳು ಬರುತ್ತಾರೆ. ಮೂಲಸೌಕರ್ಯ ಇರಲಿಲ್ಲ. 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 250 ಬೆಡ್ ಜಿಲ್ಲಾ ಆಸ್ಪತ್ರೆಯಿಂದ 300 ಬೆಡ್‌ಗೆ ಮಾಡಲು ರಾಜ್ಯ ಸರ್ಕಾರದಿಂದ ಅನುಮತಿ ಸಿಗಲಿದೆ. ಕೇಂದ್ರ ಸರ್ಕಾರ ಅನುಮತಿ ಸಿಗಬೇಕು. ಇನ್ನೂ ಕೇಂದ್ರದಿAದ ವಿಮಾನ ನಿಲ್ದಾಣ, ಒಂದೇ ಭಾರತ್ ರೈಲು ಆರಂಭವಾದರೆ ಈ ಭಾಗದ ಜನರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲ ಎಂದರು.

ಶಾಸಕ ಗವಿಯಪ್ಪ, ನೇಮರಾಜ್ ನಾಯ್ಕ, ಡಿಎಚ್ ಒ ಎಲ್.ಆರ್.ಶಂಕರ್ ನಾಯ್ಕ, ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ ಇತರರಿದ್ದರು.

ರೈಲ್ವೆ ಹೊಸ ಬಿಜಿ ಲೈನ್ ಸಮೀಕ್ಷೆ

ಸಂಡೂರು ತಾಲೂಕಿನ ಸ್ವಾಮಿಹಳ್ಳಿಯಿಂದ ರಾಯದುರ್ಗದವರೆಗೆ ಹೊಸ ಬಿಜಿ ಲೈನ್ ಕಾಮಗಾರಿ (ಮೊಣಕಾಲ್ಮೂರು ಮೂಲಕ) ಸರ್ವೆ ಕಾರ್ಯವನ್ನು ನಡೆಸುತ್ತಿದೆ. ಹೊಸಪೇಟೆಯಿಂದ ಸ್ವಾಮಿಹಳ್ಳಿ ಮಾರ್ಗದಲ್ಲಿ ಟರ್ಮಿನಲ್ ಪಾಯಿಂಟ್ ಆಗಿದೆ. ಸ್ವಾಮಿಹಳ್ಳಿಯಿಂದ ಗೊಲ್ಲಲಿಂಗಮ್ಮನಹಳ್ಳಿ, ರಾಮಾಪುರ, ರಾಮಸಾಗರ, ಹಾನಗಲ್ ಮತ್ತು ಮೊಳಕಾಲ್ಮುರು ನಿಲ್ದಾಣಗಳು ಅಂದಾಜು 55 ಕಿಮೀ ಇವೆ. ಜೋಡಣೆ ಮತ್ತು ಇತರ ತಾಂತ್ರಿಕ ಸಮಸ್ತೆಗಳನ್ನು ಅಂತಿಮಗೊಳಿಸಲು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಸಮೀಕ್ಷೆ ನಂತರ ಅನುಮೋದನೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವೆ. ಇದರಿಂದ ಬೆಂಗಳೂರಿಗೆ ಕಡಿಮೆ ಸಮಯದಲ್ಲಿ ಹೋಗಲು ಅನುಕೂಲ ಆಗಲಿದೆ. ಈ ಭಾಗದ ಹಲವು ರೈಲ್ವೆ ಬೇಡಿಕೆಗಳಿಗೆ ಸ್ಪಂಧಿಸುವೆ ಎಂದು ಸಂಸದ ಈ.ತುಕಾರಾಮ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net