ಮಾ.17ರಿಂದ 24ರಂದು ದೆಹಲಿಯಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರಿಕೆಟ್ ತಂಡಕ್ಕೆ ಕೋಚ್, ವ್ಯವಸ್ಥಾಪಕ ಸೇರಿದಂತೆ 18 ಕ್ರೀಡಾಪಟುಗಳಲ್ಲಿ ಪ್ರಕಾಶ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ತಂಡದ ನಾಯಕ ಸೇರಿ ಕಲ್ಯಾಣ ಕರ್ನಾಟಕದಿಂದ 7 ಜನ ಆಯ್ಕೆ ಯಾಗಿದ್ದಾರೆ. ಉಳಿದವರು ಬೆಂಗಳೂರಿನಿಂದ ಆಯ್ಕೆಯಾಗಿದ್ದಾರೆ. ಶಿಕ್ಷಣ ಇಲಾಖೆಯ ಕಮಲಾಪುರದ ಸಿಆರ್ ಪಿ ಹುದ್ದೆಯಲ್ಲಿರುವ ಪ್ರಕಾಶ ಕಡಬಗೆರೆ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇವರಿಗೆ ಪ್ರಯಾಣ ಹಾಗೂ ದಿನದ ಭತ್ತೆಯೊಂದಿಗೆ ಆದೇಶ ನೀಡಲಾಗಿದೆ.