

ಹೊಸಪೇಟೆ: ಚುನಾವಣೆ ಪೂರ್ವದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಷ್ಟ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲಿನ ದಾಳಿ ಮತ್ತು ಕೋಮು ದ್ವೇಷದ ವಿರುದ್ಧ ಒಟ್ಟಾಗಿ ನಿಂತಿದ್ದು, ಇಂಡಿಯಾ ಒಕ್ಕೂಟಕ್ಕೆ ಮುನ್ನೆಡೆ ಕೊಟ್ಟಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸತತ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಹುಮತ ಪಡೆದು ದಶಕಗಳ ಕಾಲ ಜನವಿರೋದಿ ದುರಾಡಳಿತ ನಡೆಸಿದ್ದ ಬಿಜೆಪಿಗೆಯಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಹಾಗೂ ಜನ ಜೀವನದ ಮೇಲಿನ ಧಾಳಿಗಳನ್ನು ಸಹಿಸುವುದಿಲ್ಲವೆಂಬ ಸಂದೇಶವನ್ನು ಜನತಾ ತೀರ್ಪು ಬಂದಿದೆ. ಜೂ.4ರಂದು ದೇಶದ ಮತದಾರರು ನೀಡಿರುವ ತೀರ್ಪು ಬಿಜೆಪಿ ಹಾಗೂ ನರೇಂದ್ರ ಮೋದಿಯವರಿಗೆ ಮುಖಭಂಗ ಉಂಟು ಮಾಡಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಮೋದಿಯವರು ಚುನಾವಣೆ ಸಂದರ್ಭದಲ್ಲಿ ದ್ವೇಷ ಪೂರಿತ ಮಾತಾಡುತ್ತಿದ್ದರು. ಈ ಬಗ್ಗೆ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಿದರೂ ಕ್ರಮ ಕೈಗೊಳ್ಳಲಿಲ್ಲ. ಕ್ರಮ ಕೈಗೊಂಡಿದ್ದರೆ ಇದಕ್ಕಿಂತಲೂ ಕಡಿಮೆ ಸ್ಥಾನ ಪಡೆಯುತ್ತಿದ್ದರು ಎಂದರು.
ರಾಜ್ಯದ ಜನರೂ ಕೂಡ ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ. ಜೆಡಿಎಸ್ ಜತೆ ಮೈತ್ರಿ ಮತ್ತು ಜನಾರ್ಧನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಲಿಂಗಾಯತ ಹಾಗೂ ಒಕ್ಕಲಿಗ ಜಾತಿ ಸಮೀಕರಣ ಮಾಡಿ, ಕೋಮುವಾದ ಅಪ್ಪಿಕೊಂಡಿದ್ದರೂ. ಮೋದಿ ಹಲವಾರು ಬಾರಿ ಬಂದು ಪ್ರಚಾರ ಮಾಡಿದ್ದರು. ಇಷ್ಟೆಲ್ಲ ಆದರೂ ಹಿನ್ನೆಡೆಯಾಗಿದೆ. ಶೇ.5.5ರಷ್ಟು ಮತಗಳ ಹಿನ್ನೆಡೆಯಾಗಿದೆ ಎಂದರು.
ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಬಹುದೆಂಬ ಸಂಶಯವಿರುವುದರಿAದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಚೆ ನ್ಯಾಯಾಂಗ ವ್ಯವಸ್ಥೆಯಿಂದ ತನಿಖೆ ಆಗಬೇಕು. ಈ ನಿಗಮದಲ್ಲಿ ಮಾತ್ರ ಹಗರಣ ನಡೆದಿದೆಯಾ ಎನ್ನಲಾಗಿದ್ದು, ಉಳಿದ ನಿಗಮಗಳನ್ನು ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಆರ್.ಎಸ್.ಬಸವರಾಜ, ಬಿ.ಮಾಳಮ್ಮ, ಭಾಸ್ಕರ್ ರೆಡ್ಡಿ ಇದ್ದರು.