

ಹೊಸಪೇಟೆ: ಶಿಕ್ಷಣ ಸಚಿವರ ರಾಜಿನಾಮೆ, ಕ್ರಿಮಿನಲ್ ತಿದ್ದುಪಡಿ ಕಾಯ್ದೆ ವಾಪಸ್ ಮತ್ತು ದೇಶಾದ್ಯಂತ ಮುಸ್ಲಿಂ ಅಲ್ಪ ಸಂಖ್ಯಾರ ಮೇಲಿನ ಮತಾಂಧ ದಾಳಿ ಙನಖಂಡಿಸಿ ,ಸಿಪಿಐ (ಎಂ) ಕಾರ್ಯಕರ್ತರು ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು
ದೇಶದಲ್ಲಿ ರಾಷ್ಟ್ರೀಯ ಪರೀಕ್ಷಾ ಎಜೆನ್ಸಿ ನಡೆಸಿದ ಪರೀಕ್ಷೆಗಳ ಹಗರಣದಿಂದ ವಿದ್ಯಾರ್ಥಿಗಳ ಭವಿಷ್ಯ ಪೋಷಕರ ಕನಸು ನುಚ್ಚು ನೂರು ಮಾಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ಇಕ್ಕಟಿಗೆ ಸಿಲುಕುವಂತಾಗಿದೆ. ಶಿಕ್ಷಣದ ಕೇಂದ್ರೀಕರಣ, ವ್ಯಾಪಾರೀಕರಣ ಹಾಗೂ ಕೋಮುವಾದ ಪ್ರತಿಪಾದಿಸುವ ಎನ್‌ಇಪಿ ಕೈಬಿಡಬೇಕು. ತರಾತುರಿತಲ್ಲಿ ಜಾರಿಗೊಳಿಸಿರುವ ಜನವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಿಮಿನಲ್ ಕಾನೂನುಗಳನ್ನು ವಾಪಸು ಪಡೆಯಬೇಕು. ಇದು ಜನರನ್ನು ರಾಷ್ಟ್ರ ವಿರೋಧಿಗಳೆಂದು ಆರೋಪಿಸಿ ಶಿಕ್ಷೆ ನೀಡಲು ದಾರಿಯಾಗಿದೆ. ಅಲ್ಪಸಂಖ್ಯಾತರ ಮೇಲೆ ದೇಶದ ವಿವಿಧ ಬಾಗದಲ್ಲಿ ದಾಳಿ ನಡೆಸಲಾಗಿದ್ದು ಖಂಡನೀಯ. ದೇಶದ ಮುಸ್ಲಿಂ ಸಮಾಜದ ರಕ್ಷಣೆಗೆ ಅಗತ್ಯ ಕ್ರಮವಹಿಸಬೇಕುʼ ಎಂದು ಒತ್ತಾಯಿಸಿದರು.
ಪ್ರಮುಖರಾದ ಜಂಬಯ್ಯನಾಯಕ, ಭಾಸ್ಕರ್ ರೆಡ್ಡಿ, ಯಲ್ಲಲಿಂಗ. ವಿ.ಸ್ವಾಮಿ. ಗೋಪಾಲ್ ಇತರರಿದ್ದರು.